ನವದೆಹಲಿ, ನ 04 (DaijiworldNews/MS): ಭಾರತ್ ಬಯೋಟೆಕ್ನ ಕೊರೊನಾವೈರಸ್ ಲಸಿಕೆ ಕೋವಾಕ್ಸಿನ್ ನ ಉತ್ಪಾದನೆಯ ದಿನಾಂಕದಿಂದ 12 ತಿಂಗಳವರೆಗೆ ಗಡುವಿನ ಅವಧಿಯನ್ನು ಭಾರತದ ಔಷಧ ನಿಯಂತ್ರಕ ವಿಸ್ತರಣೆ ಮಾಡಿದೆ.
ಈ ಬಗ್ಗೆ ಭಾರತ್ ಬಯೋಟೆಕ್ ಪ್ರಕಟನೆ ಹೊರಡಿಸಿದ್ದು, ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಮ್ಮ ಲಸಿಕೆಯನ್ನು ಉತ್ಪಾದನೆಯ ದಿನಾಂಕದಿಂದ 12 ತಿಂಗಳವರೆಗೆ ಶೆಲ್ಫ್-ಲೈಫ್ ವಿಸ್ತರಣೆಯನ್ನು ಅನುಮೋದಿಸಿದೆ ಎಂದು ಹೇಳಿದೆ. ಶೆಲ್ಫ್-ಲೈಫ್ ವಿಸ್ತರಣೆಯ ಈ ಅನುಮೋದನೆಯು ಹೆಚ್ಚುವರಿ ಸ್ಥಿರತೆಯ ಡೇಟಾದ ಲಭ್ಯತೆ ಆಧರಿಸಿ ವಿಸ್ತರಣೆ ಮಾಡಿದೆ ಎನ್ನಲಾಗಿದೆ.
ಭಾರತ್ ಬಯೋಟೆಕ್ ಈ ವರ್ಷದ ಆರಂಭದಲ್ಲಿ ತನ್ನ ಲಸಿಕೆಯ ಶೆಲ್ಫ್-ಲೈಫ್ ಅನ್ನು 24 ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಭಾರತದ ಡ್ರಗ್ ರೆಗ್ಯುಲೇಟರ್ಗೆ ಪತ್ರ ಬರೆದಿತ್ತು. ಹೈದರಾಬಾದ್ ಮೂಲದ ಸಂಸ್ಥೆಯು ತನ್ನ ಅರ್ಜಿಯನ್ನು ದೃಢೀಕರಿಸಲು ಡ್ರಗ್ ರೆಗ್ಯುಲೇಟರ್ಗೆ ಕೋವಾಕ್ಸಿನ್ನ ಅಗತ್ಯ ನೈಜ-ಸಮಯದ ಸ್ಥಿರತೆಯ ಡೇಟಾವನ್ನು ಸಲ್ಲಿಸಿದೆ ಎಂದು ಹೇಳಿದೆ .
ಪ್ರಸ್ತುತ ಕೋವಾಕ್ಸಿನ್ ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ನಲ್ಲಿ ಅದರ ಸಂಗ್ರಹಣೆಗೆ ಒಳಪಟ್ಟಿರುವ ಆರು ತಿಂಗಳ ಅನುಮೋದಿತ ಶೆಲ್ಫ್-ಲೈಫ್ ಅನ್ನು ಹೊಂದಿದೆ.