ನಾಗ್ಪುರ, ನ 04 (DaijiworldNews/MS): ವಿಲಕ್ಷಣ ಘಟನೆಯೊಂದರಲ್ಲಿ, 6 ವರ್ಷದ ಬಾಲಕನೊಬ್ಬನು ಗಾಳಿ ತುಂಬುತ್ತಿದ್ದ ಬಲೂನ್ ಗಂಟಲಿಗೆ ಸಿಲುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಸೋಮವಾರ ಸಂಜೆ 4:30 ರ ಸುಮಾರಿಗೆ ನಗರದ ನಂದನವನ ಪ್ರದೇಶದ ಸ್ವರಾಜ್ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು ಬಲೂನ್ ಅನ್ನು ಗಾಳಿ ತುಂಬಿಸಿ ಹಿಗ್ಗಿಸುವಾಗ , ಅದು ಅವನ ಗಂಟಲಿಗೆ ಸಿಲುಕಿದ್ದು , ಉಸಿರುಗಟ್ಟುವಿಕೆಗೆ ಕಾರಣವಾಯಿತು. ತಕ್ಷಣ ಕುಟುಂಬ ಸದಸ್ಯರು ಬಲೂನ್ ತೆಗೆಯಲು ಯತ್ನಿಸಿದರಾದರೂ ವಿಫಲವಾಯಿತು.
ಇದಲ್ಲದೇ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಾರ್ಗಮಧ್ಯದದಲ್ಲಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಇದೇ ವೇಳೆ ಘಟನೆ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಂದನ್ವನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರಕರಣವನ್ನ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.