ದೆಹಲಿ, ನ 04 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ, ವ್ಯಾಟಿಕನ್ ನಗರ-ರಾಜ್ಯ ಮತ್ತು ಬ್ರಿಟನ್ ನ ತಮ್ಮ ಐದು ದಿನಗಳ ಅಧಿಕೃತ ಭೇಟಿಯನ್ನು ಮುಗಿಸಿದ ನಂತರ ಬುಧವಾರ ದೆಹಲಿಗೆ ಬಂದಿಳಿದಿದ್ದಾರೆ.
ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ 29 ರಂದು ಭಾರತದಿಂದ ತೆರಳಿದ್ದರು. . ಕೋವಿಡ್-19 ಸಾಂಕ್ರಾಮಿಕದ ಬಳಿಕ ಮೂರನೇ ವಿದೇಶ ಭೇಟಿಯಾಗಿದೆ. ಈ ವರ್ಷದ ಮಾರ್ಚ್ನಲ್ಲಿ ಬಾಂಗ್ಲಾದೇಶ ಮತ್ತು ಸೆಪ್ಟೆಂಬರ್ನಲ್ಲಿ ಅಮೇರಿಕಾ ಪ್ರವಾಸಕ್ಕೆ ತೆರಳಿದ್ದರು.
ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಗಳಲ್ಲಿ ಸಾಕಷ್ಟು ವಿಶ್ವ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದ ಪ್ರಧಾನಿ ಮೋದಿ ತಮ್ಮ ಪ್ರವಾಸ ಅಂತಿಮ ದಿನ ಗ್ಲಾಸ್ಗೋದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ತಮ್ಮ ಪಕ್ಷ ಸೇರಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಆಹ್ವಾನ ನೀಡಿದ್ದಾರೆ.