ಬೆಂಗಳೂರು, ನ.03 (DaijiworldNews/PY): "ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಗಮನಕ್ಕೆ, ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶ ಬಿಜೆಪಿ ಹಾಗೂ ಅಂಗಪಕ್ಷಗಳ ಪರವೇ ಇದೆ" ಎಂದು ಬಿಜೆಪಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, "ವೈಯುಕ್ತಿಕ ವರ್ಚಸ್ಸಿನ ಆಧಾರದಲ್ಲಿ ಗೆದ್ದ ಒಂದು ಕ್ಷೇತ್ರದ ಗೆಲುವನ್ನು ನೆಪವಾಗಿರಿಸಿಕೊಂಡು, ದೇಶಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಗಮನಕ್ಕೆ, ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶ ಬಿಜೆಪಿ ಹಾಗೂ ಅಂಗಪಕ್ಷಗಳ ಪರವೇ ಇದೆ" ಎಂದಿದೆ.
ಹಾನಗಲ್ ಕ್ಷೇತ್ರದ "ವೈಯಕ್ತಿಕ ವರ್ಚಸ್ಸಿನ" ಒಂದು ಗೆಲುವು ಕಾಂಗ್ರೆಸ್ ನಾಯಕರಿಗೆ ಮರುಭೂಮಿಯಲ್ಲಿ ಒಯಸಿಸ್ ಲಭಿಸಿದ ಹಾಗಾಗಿದೆ. ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶದ ಅವಲೋಕನ ಮಾಡಿದಾಗ "ಎದ್ದಿರುವುದು ಕಾಂಗ್ರೆಸ್ ಪರವಾದ ಅಲೆಯಲ್ಲ, ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ" ಎಂದು ಲೇವಡಿ ಮಾಡಿದೆ.