ಬೆಂಗಳೂರು, ನ.03 (DaijiworldNews/PY): "ಮುಂದಿನ ದಿನಗಳಲ್ಲಿ ಸೋಲಿನ ಕಾರಣಗಳನ್ನು ಆತ್ಮವಿಮರ್ಶೆ ಮಾಡಿ ಸರಿಪಡಿಸಿಕೊಳ್ಳುತ್ತೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಹಾನಗಲ್ನಲ್ಲಿ ಸಿಎಂ ಉದಾಸಿ ಅವರ ಬೇಸ್ ಮುಂದುವರಿಸಲು ಸ್ವಲ್ಪ ಮಟ್ಟಿಗೆ ಆಗಲಿಲ್ಲ. ಕೊರೊನಾ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಜನರ ಪರ ಕೆಲಸ ಮಾಡಿದ್ದರು ಎನ್ನುವ ಭಾವನೆ ಜನರಲ್ಲಿತ್ತು. ನಮ್ಮ ಸೋಲಿಗೆ ಇವೆರೆಡು ಕಾರಣ. ಹೈಕಮಾಂಡ್ಹೆ ಫಲಿತಾಂಶದ ವಿಚಾರ ತಿಳಿಸುವ ಕಾರ್ಯವನ್ನು ಪಕ್ಷ ಮಾಡುತ್ತದೆ" ಎಂದಿದ್ದಾರೆ.
"ಒಂದು ಕಡೆ ಸೋಲಾಗಿದೆ, ಮತ್ತೊಂದು ಕಡೆ ಗೆಲುವಾಗಿದೆ. ಸೋಲು ಹಾಗೂ ಗೆಲುವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಗೆಲುವಿಗೆ ಶ್ರಮಪಟ್ಟ ನಮ್ಮ ನಾಯಕರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ" ಎಂದು ಹೇಳಿದ್ದಾರೆ.
"ಪ್ರತಿವರ್ಷ ದೀಪಾವಳಿ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಆಚರಿಸುತ್ತೇನೆ. ಇಂದು ಹಿರಿಯರ ಹಬ್ಬ, ನಾಡಿದ್ದು ಬೆಂಗಳೂರಿಗೆ ವಾಪಾಸ್ಸು ಬರುತ್ತೇನೆ" ಎಂದು ತಿಳಿಸಿದ್ದಾರೆ.
ಬಿಟ್ ಕಾಯಿನ್ ದಾಖಲೆ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ದಾಖಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಾವು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದೇವೆ" ಎಂದಿದ್ದಾರೆ.