ಮುಂಬೈ, ನ. 02 (DaijiworldNews/HR): ಮಹಾರಾಷ್ಟ್ರ ಮಾಜಿ ಗೃಹ ಸಚಿವ, ಎನ್ಸಿಪಿಯ ಹಿರಿಯ ನಾಯಕ ಅನಿಲ್ ದೇಶ್ಮುಖ್ರನ್ನು ನವೆಂಬರ್ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ ಎಂದು ತುಳಿದು ಬಂದಿದೆ.
ಅನಿಲ್ ದೇಶ್ಮುಖ್ ಲಂಚ ಆರೋಪವನ್ನು ಎದುರಿಸುತ್ತಿದ್ದು, ಇಡಿಯ ಪ್ರಶ್ನೆಗೆ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದ ಕಾರಣ ಅವರನ್ನು ಬಂಧಿಸಿರುವುದಾಗಿ ಹೇಳಿತ್ತು. ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇಶ್ಮುಖ್ ಈ ವರ್ಷದ ಆರಂಭದಲ್ಲಿಯೇ ಗೃಹ ಸಚಿವನ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.
ಇನ್ನು ಎನ್ಸಿಪಿ ಸ್ಥಾಪಕ ಹಾಗೂ ಅಧ್ಯಕ್ಷ ಶರದ್ಪವಾರ್ ಆಪ್ತರಾಗಿರುವ ಅನಿಲ್ ದೇದೇಶಮುಖ್ ಗೆ ಜಾರಿ ನಿರ್ದೇಶನಾಲಯ ಈ ಹಿಂದೆ ಐದು ಬಾರಿ ಸಮನ್ಸ್ ನೀಡಿತ್ತು.
ಮಾಜಿ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಉನ್ನತಾಧಿಕಾರಿ ಪರಮ್ ಬೀರ್ ಸಿಂಗ್ ಲಂಚದ ಆರೋಪ ಮಾಡಿದ್ದರು. ಈ ಸಂಬಂಧ ಇಡಿ ಅನಿಲ್ ದೇಶ್ಮುಖ್ಗೆ ಸಾಕಷ್ಟು ಬಾರಿ ಸಮನ್ಸ್ ನೀಡಿತ್ತು. ಆದರೆ ಈ ಸಮನ್ಸ್ ರದ್ದುಮಾಡುವಂತೆ ಕೋರಿ ಅನಿಲ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು.