ಕೇರಳ, ನ. 02 (DaijiworldNews/HR): ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಚಿಥಿರ ಅಟ್ಟತಿರುನಾಳ್ ಹಬ್ಬದ ಪ್ರಯುಕ್ತ ಇಂದಿನಿಂದ ಪುನಾರಂಭಗೊಂಡಿದ್ದು, ಕೊರೊನಾ ಮಾರ್ಗಸೂಚಿ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿಯೇ ಸ್ಲಾಟ್ ಬುಕ್ಕಿಂಗ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳು ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿರುವುದು ಕಡ್ಡಾಯವಾಗಿದ್ದು, ಕೊರೊನಾ ಲಸಿಕೆಯ ಪಡೆಯದವರು ಅಥವಾ ಕೇವಲ 1 ಡೋಸ್ ಲಸಿಕೆಯನ್ನು ಸ್ವೀಕರಿಸಿದವರು ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು ಎಂದು ಸೂಚಿಸಲಾಗಿದೆ.
ಇನ್ನು ಹರಿವರಾಸನದ ಧಾರ್ಮಿಕ ವಿಧಿ ವಿಧಾನಗಳ ಬಳಿಕ ರಾತ್ರಿ 9 ಗಂಟೆಗೆ ಶಬರಿಮಲೆ ದೇಗುಲವು ಬಂದ್ ಆಗಲಿದ್ದು, ಮಾಸಿಕ ಪೂಜೆಯ ಬಳಿಕ ಶಬರಿಮಲೆ ದೇವಸ್ಥಾನವು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಕ್ಕಾಗಿ ನವೆಂಬರ್ 15ರಂದು ಮತ್ತೆ ತೆರೆಯಲಿದೆ ಎಂದು ತಿಳಿದು ಬಂದಿದೆ.