ಬೆಂಗಳೂರು, ನ. 02 (DaijiworldNews/HR): ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಬೆಳಗ್ಗೆ 8 ಗಂಟೆ ಆರಂಭವಾಗಿದ್ದು, ಹಾನಗಲ್ನಲ್ಲಿ 19 ಸುತ್ತು, ಸಿಂಧಗಿಯಲ್ಲಿ 22 ಸುತ್ತುಗಳ ಎಣಿಕೆ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಹಾನಗಲ್ನ ಸರ್ಕಾರಿ ಕಾಲೇಜಿನಲ್ಲಿ, ವಿಜಯಪುರದ ಸೈನಿಕ ಶಾಲೆಯಲ್ಲಿ ಮತ ಎಣಿಕೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಅಕ್ಟೋಬರ್ 30ರಂದು ಉಪ ಚುನಾವಣೆಯ ಮತದಾನ ನಡೆದಿತ್ತು.
ಇನ್ನು ಹಾನಗಲ್ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣಲ್ಲಿದ್ದು, ಶೇ 83.44ರಷ್ಟು, ಸಿಂಧಗಿಯಲ್ಲಿ 6 ಅಭ್ಯರ್ಥಿಗಳು ಕಣದಲ್ಲಿದ್ದು, ಶೇ 69.41ರಷ್ಟು ಮತದಾನ ನಡೆದಿತ್ತು.
ಹಾನಗಲ್ನಲ್ಲಿ ಶಾಸಕರಾಗಿದ್ದ ಸಿ. ಎಂ. ಉದಾಸಿ ನಿಧನದಿಂದ ಮತ್ತು ಸಿಂಧಗಿಯಲ್ಲಿ ಶಾಸಕರಾಗಿದ್ದ ಎಂ. ಸಿ. ಮುನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿದ್ದು, ಇಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.