ಕೊಡಗು, ನ.01(DaijiworldNews/HR): ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ದನವನ್ನು ಮೇಯಿಸಲು ಹೋಗಿದ್ದಾಗ ನೀರುಪಾಲಾಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಆತನೊಂದಿಗೆ ನೀರುಪಾಲಾದ ಘಟನೆ ನಡೆದಿದ್ದು, ಒಂದು ದಿನದ ಬಳಿಕ ಇದೀಗ ಪುತ್ರನ ಶವವೂ ಪತ್ತೆಯಾಗಿದೆ.
ತಾಯಿ ರೇವತಿ ಹಾಗೂ ಆಕೆಯ ಪುತ್ರ ಕಾರ್ಯಪ್ಪ(12) ನೀರುಪಾಲಾಗಿ ಮೃತಪಟ್ಟವರು.
ಟಿ.ಶೆಟ್ಟಿಗೇರಿ ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ಸ್ಥಳೀಯರು ನಿನ್ನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾದರೂ ಅಷ್ಟರಲ್ಲಾಗಲೇ ರೇವತಿ ಸಾವಿಗೀಡಾಗಿದ್ದು, ಅವರ ಶವವವನ್ನು ಹೊರತೆಗೆಯಲಾಗಿತ್ತು. ಆದರೆ ನಿನ್ನೆ ಪುತ್ರನ ಪತ್ತೆ ಆಗಿರಲಿಲ್ಲ. ಇಂದು ಮತ್ತೆ ಶೋಧ ಮುಂದುವರಿಸಿದಾಗ ಬಾಲಕನ ಶವ ಸಿಕ್ಕಿದೆ.