ದಾಂತೇವಾಡ, ನ.01 (DaijiworldNews/PY): ಛತ್ತೀಸ್ಗಡದ ಅದ್ವಾಲ್ ಹಾಗೈ ಕುಂಜೇರಸ್ ನಡುವಿನ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ಮಹಿಳಾ ನಕ್ಸಲರು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಮಾಹಿತಿ ನೀಡಿದ್ದು, "ಇವರೆಲ್ಲರಿಗೂ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು" ಎಂದಿದ್ದಾರೆ.
"ಜಿಲ್ಲಾ ರಿಸರ್ವ ಗಾರ್ಡ್ ಸಿಬ್ಬಂದಿಗಳು ಹಾಗೂ ನಕ್ಸಲರೊಂದಿಗೆ ದಾಂತೇವಾಡದ ಅದ್ವಾಲ್ ಮತ್ತು ಕುಂಜರ ಜಂಗಲ್ಸ್ನಲ್ಲಿ ಭಾನುವಾರ ಎನ್ಕೌಂಟರ್ ನಡೆದಿತ್ತು. ಎನ್ಕೌಂಟರ್ನ ಸಂದರ್ಭ ಎರಡು ಕಡೆಯವರೂ ಕೂಡಾ ತೀವ್ರ ಗುಂಡಿನ ಚಕಮಕಿ ನಡೆಸಿದ್ದಾರೆ. ಎನ್ಕೌಂಟರ್ ಮುಗಿದ ಬಳಿಕ ಕಾಡಿನಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗಿತ್ತು. ಈ ಸಂದರ್ಭ ಯೋಧರು, ಮೂವರು ಮಹಿಳಾ ನಕ್ಸಲೀಯರ ಶವಗಳನ್ನು ವಶಪಡಿಸಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ಎನ್ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಸುಧಾರಿತ ಸ್ಪೋಟಕ ಸಾಧನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಛತ್ತೀಸ್ಗಡದ ಪೊಲೀಸರು ಹಾಗೂ ಡಿಆರ್ಜಿ ಅರಣ್ಯಗಳಲ್ಲಿ ಭದ್ರತಾ ಪಡೆಗಳ ಯೋಧರೊಂದಿಗೆ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.