ಬೆಂಗಳೂರು, ನ.01(DaijiworldNews/HR): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ಬೇಸರಗೊಂಡ ಅಭಿಮಾನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಾನುಭೋಗನಹಳ್ಳಿ ನಿವಾಸಿ ರಾಜೇಂದ್ರ (40) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ.
ಮಗ್ಗದ ಕೆಲಸ ಮಾಡಿಕೊಂಡಿದ್ದ ರಾಜೇಂದ್ರ ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದು, ಭಾನುವಾರ ಬೆಳಗ್ಗೆ ತನ್ನ ಕಣ್ಣುಗಳನ್ನು ಪುನೀತ್ರಂತೆ ದಾನ ಮಾಡಿ ಎಂದು ಮನೆಯವರಲ್ಲಿ ತಿಳಿಸಿದ್ದು ಎಂದು ವರದಿಯಾಗಿದೆ.
ಇನ್ನು ರಾಜೇಂದ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದು ಮನೆಯವರ್ಯಾರೂ ಊಹಿಸಿರಲಿಲ್ಲ. ಆದರೆ ಭಾನುವಾರ ನಿನ್ನೆ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.