ಲಕ್ನೋ, ನ.01 (DaijiworldNews/PY): "ತಾಲಿಬಾನ್ ಗುಂಪು ಭಾರತದತ್ತ ಬಂದರೆ ವೈಮಾನಿಕ ದಾಳಿ ಸಜ್ಜಾಗಿದೆ" ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, "ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಶಕ್ತಿಶಾಲಿಯಾಗಿದೆ. ಭಾರತದತ್ತ ಯಾವುದೇ ದೇಶವೂ ದೃಷ್ಟಿ ಹಾಯಿಸುವ ಧೈರ್ಯ ಹೊಂದಿಲ್ಲ. ತಾಲಿಬಾನ್ ಒಂದು ವೇಳೆ ಭಾರತದ ತಂಟೆಗೆ ಬಂದಲ್ಲಿ ವೈಮಾನಿಕ ದಾಳಿಯನ್ನು ಎದುರಿಸಬೇಕಾಗುತ್ತದೆ ಎನ್ನವುದು ತಾಲಿಬಾನ್ಗೆ ತಿಳಿದಿದೆ" ಎಂದಿದ್ದಾರೆ.
ಎಸ್ಬಿಎಸ್ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಅವರನ್ನು ಉಲ್ಲೇಖಿಸಿದ ಅವರು, "ಓಂ ಪ್ರಕಾಶ್ ರಾಜ್ಭರ್ ಅವರ ಚಿಂತನಾ ಲಹರಿಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರವೇ ಸೀಮಿತವಾಗಿದೆ" ಎಂದು ಲೇವಡಿ ಮಾಡಿದ್ದಾರೆ.
"ಅಭಿವೃದ್ಧಿಗಾಗಿ ಕಾಂಗ್ರೆಸ್,ಎಸ್ಪಿ ಹಾಗೂ ಬಿಎಸ್ಪಿ ಪಕ್ಷಗಳು ಯಾವುದೇ ಕಾರ್ಯ ಮಾಡುವುದಿಲ್ಲ" ಎಂದಿದ್ದಾರೆ.