ತುಮಕೂರು, ನ 01 (DaijiworldNews/MS): ಬಹಳಷ್ಟು ಜನರು ಜೆಡಿಎಸ್ ಪಕ್ಷದಿಂದ ನಾನೇ ರಾಜೀನಾಮೆ ನೀಡಿ ಹೊರಬಂದೆ ಎಂಬ ತಪ್ಪು ಕಲ್ಪನೆ ಮಾಡಿಕೊಂಡಿದ್ದಾರೆ ಆದರೆ ವಾಸ್ತವವಾಗಿ, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಮಾಧ್ಯಮದೊಂದಿಗೆ ತುಮಕೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ನವರು ಉಪಯೋಗಿಸಿಕೊಂಡು ನಂತರ ಬಿಸಾಕುತ್ತಾರೆ.ಜನರನ್ನು ಹಣ್ಣು ತಿಂದು ಸಿಪ್ಪೆ ಬಿಸಾಕಿದಂತೆ ಉಪಯೋಗಿಸಿಕೊಳ್ಳೋದು ದೇವೇಗೌಡರ ಪ್ರವೃತ್ತಿ . ನಾನು ಅಹಿಂದ ಸಂಘಟನೆ ಆರಂಭಿಸಿದ್ದೆ. ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಬೇಡ ಎಂದು ದೇವೇಗೌಡರು ನನಗೆ ಹೇಳಿದ್ದರು. ಅಚ್ಚರಿಯಾಗಿ ನಾನು ಅಹಿಂದ ಸಮಾವೇಶ ಮಾಡುವುದರಿಂದ ನಿಮಗೆ ತೊಂದರೆ ಏನು? ಎಂದು ಪ್ರಶ್ನಿಸಿ ಅದರಿಂದ ಪಕ್ಷಕ್ಕೆ ಅನುಕೂಲ ಅಗುವ ವಿಚಾರವನ್ನು ವಿವರಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ನಾನೇ ಹೇಳುತ್ತಿದ್ದೇನೆ ಸಮಾವೇಶ ಮಾಡಬೇಡ ಎಂದು ದೇವೇಗೌಡರು ಹೇಳಿದರು. ಸಮಾವೇಶಕ್ಕೆ ನೀವು ಬನ್ನಿ ಜೊತೆಯಾಗಿ ಮಾಡೋಣ ಅಂದೆ. ಅವರು ಅದಕ್ಕೂ ಒಪ್ಪಿಲ್ಲ. ಕೊನೆಗೆ ನನ್ನ ಮೇಲೆ ಕ್ರಮ ಜರುಗಿಸುತ್ತೇನೆ ಎಂದರು, ಸರಿ ನಾನು ಅದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿ, ಸಮಾವೇಶ ಮಾಡಿದೆ. ಆಮೇಲೆ ನನ್ನನ್ನು ಪಕ್ಷದಿಂದ ಹೊರಹಾಕಿದರು.
ಈಗ ಕುಮಾರಸ್ವಾಮಿ ಅವರು ಗುಬ್ಬಿಯಲ್ಲಿ ಸಭೆ ನಡೆಸಿ ಶ್ರೀನಿವಾಸ್ ಅವರನ್ನು ಹೊರಹಾಕಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಭೆಗೆ ಶ್ರೀನಿವಾಸ್ ಅವರನ್ನು ಕರೆದಿದ್ದರೆ? ನಾಲ್ಕು ಬಾರಿ ಶಾಸಕರಾದವರನ್ನು ಕಾಲು ಕಸದಂತೆ ಕಂಡರೆ ಅವರಾದ್ರೂ ಏನು ಮಾಡಬೇಕು? ಜೆಡಿಎಸ್ ನವರು ಉಪಯೋಗಿಸಿಕೊಂಡು ನಂತರ ಬಿಸಾಕುತ್ತಾರೆ. ನನ್ನನ್ನೂ ಪಕ್ಷದಿಂದ ಹೊರಹಾಕಿದ್ದರು ಎಂದು ಹೇಳಿದರು.