ಬೆಂಗಳೂರು, ನ.01 (DaijiworldNews/PY): ಆಭರಣ ಟೈಮ್ಲೆಸ್ ಜ್ಯುವೆಲ್ಲರಿಯ ಮೂರನೇ ಶೋರೂಂ ಸೋಮವಾರ ಬೆಂಗಳೂರಿನ ಜೆ ಪಿ ನಗರದಲ್ಲಿ ಶುಭಾರಂಭಗೊಂಡಿತು.
ಆಭರಣ ಟೈಮ್ಲೆಸ್ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕ ಪ್ರತಾಪ್ ಎಂ ಕಾಮತ್ ಅವರ ಮಾತಾಶ್ರೀ, ನಿರ್ದೇಶಕಿಯೂ ಆಗಿರುವ ಶ್ರೀ ಲಕ್ಷ್ಮೀ ಕಾಮತ್ ಮೂರನೇ ಶಾಖೆಯನ್ನು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಸಂಸ್ಥೆಯ ಆಡಳಿತ ನಿರ್ದೇಶಕಿ ಪ್ರೀತಿ ಕಾಮತ್, ನಿರ್ದೇಶಕ ಭರತ್ ಎಂ ಕಾಮತ್, ಆಭರಣ ಟೈಮ್ಲೆಸ್ ಜ್ಯುವೆಲ್ಲರಿ ಸಂಸ್ಥೆ ಉಪಾಧ್ಯಕ್ಷ ದೇವದಾಸ್ ಕಾಮತ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಈಗಾಗಲೇ ಎರಡು ಶಾಖೆಗಳೊಂದಿಗೆ ಜನಪ್ರಿಯವಾಗಿರುವ ಈ ಸಂಸ್ಥೆಯ ಮೂರನೇ ಶಾಖೆ ಇದಾಗಿದ್ದು, ಸಿಲಿಕಾನ್ ನಗರಿಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.