ಲಖನೌ, ನ.01(DaijiworldNews/HR): ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಉತ್ತರ ಪ್ರದೇಶದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಪತ್ರ ಬರೆದಿದ್ದು, ಎಲ್ಲರಲ್ಲಿಯೂ ಭೀತಿ ಉಂಟಾಗಿದೆ.
ಸಾಂದರ್ಭಿಕ ಚಿತ್ರ
ಈ ಬೆದರಿಕೆ ಪತ್ರ ಹಾಪುರದ ರೈಲ್ವೆ ನಿಲ್ದಾಣದ ಮಾಸ್ಟರ್ಗೆ ಬಂದಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ ಮತ್ತು ನಿಲ್ದಾಣಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ಜಿಆರ್ಪಿ, ಆರ್ ಪಿಎಫ್ ಮತ್ತು ಶ್ವಾನದಳವನ್ನು ನಿಯೋಜಿಸಲಾಗಿದೆ.
ಇನ್ನು ಉತ್ತರ ಪ್ರದೇಶದ 46 ಪ್ರಮುಖ ರೈಲು ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಒಡ್ಡಿರುವುದಾಗಿ ಗುಪ್ತಚರ ಮಾಹಿತಿ ಬಂದಿದ್ದು, ಪ್ರಸ್ತುತ ಭಯೋತ್ಪಾದಕ ಸಂಘಟನೆಯಿಂದ ಸ್ಫೋಟಗೊಳ್ಳುವ ಬೆದರಿಕೆ ಇರುವ ನಿಲ್ದಾಣಗಳಲ್ಲಿ ಲಕ್ನೋ, ವಾರಣಾಸಿ, ಪ್ರಯಾಗ್ ರಾಜ್, ಕಾನ್ಪುರ ಮತ್ತು ಗೋರಖ್ ಪುರ ಸೇರಿದ್ದು, ವಾರಾಣಸಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ನಲ್ಲಿ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ನೀಡಿದ ನಂತರ ಮತ್ತು ಜಿಆರ್ ಪಿ ಮತ್ತು ಆರ್ ಪಿಎಫ್ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.