ಬೆಂಗಳೂರು, ನ.01 (DaijiworldNews/PY): "ಮುಂಬರುವ ಸಚಿವ ಸಂಪುಟದಲ್ಲಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಲಾಗುವುದು" ಎಂದು ಸಿಎಮ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟವನ್ನಾಗಿ ಮಾಡಬೇಕು" ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
"ಮುಂಬೈ ಕರ್ನಾಟಕ ವಿವಾದ ಇದ್ದಾಗಲೂ ಕೂಡಾ ಕಿತ್ತೂರು ಕರ್ನಾಟಕ ಎನ್ನಬೇಕು. ಮುಂದಿನ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಲಾಗುವುದು" ಎಂದಿದ್ದಾರೆ.
"ಭಾರತದಲ್ಲಿ ಕನ್ನಡ ಭಾಷೆಯು ಅತ್ಯಂತ ಪುರಾತನವಾದ ಭಾಷೆ. ಕನ್ನಡಕ್ಕೆ ಎಲ್ಲಾ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನಮಾನ ಸಿಗಬೇಕು. ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು. ಕನ್ನಡವನ್ನು ಹೆಮ್ಮರವಾಗಿ ಬೆಳೆಸಬೇಕು. ಭಾಷೆ ಸದೃಢವಾದಲ್ಲಿ ರಾಜ್ಯ ಶಕ್ತಿಶಾಲಿಯಾಗುತ್ತದೆ" ಎಂದು ತಿಳಿಸಿದ್ದಾರೆ.