ತಿರುಪತಿ, ನ.01 (DaijiworldNews/PY): "ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಬೇಕು" ಎಂದು ಯೋಗ ಗುರು, ಪತಂಜಲಿ ಪೀಠ ಮುಖ್ಯಸ್ಥ ಬಾಬಾ ರಾಮದೇವ್ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಮಹತಿ ಆಡಿಟೋರಿಯಂನಲ್ಲಿ ಟಿಟಿಡಿ ಆಯೋಜಿಸಿದ್ದ ಎರಡು ದಿನಗಳ ಗೋ ಮಹಾ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಗೋ ಸಂರಕ್ಷಣೆ ಅಭಿಯಾನದಲ್ಲಿ ಪತಂಜಲಿ ಪೀಠವು ಸದಾ ಮುಂಚೂಣಿಯಲ್ಲಿ ಇರುತ್ತದೆ. ಎಲ್ಲಾ ಗೋ ಪ್ರೇಮಿಗಳಲ್ಲಿ ಗೋ ಮಹಾ ಸಮ್ಮೇಳನದ ತೀರ್ಮಾನಗಳು ಪ್ರತಿಧ್ವನಿಸುತ್ತವೆ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡುವ ಕಾನೂನನ್ನು ತರಬೇಕು" ಎಂದು ತಿಳಿಸಿದ್ದಾರೆ.
"ಟಿಟಿಡಿ ಗೋ ಮಹಾ ಸಮ್ಮೇಳನ ಕಾರ್ಯಕ್ರಮದ ಕುರಿತು ಆಂಧ್ರಪ್ರದೇಶ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ" ಎಂದಿದ್ದಾರೆ.