ಬೆಂಗಳೂರು, ನ 01 (DaijiworldNews/MS) : ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧಿಡೀರ್ ಮೃತಪಟ್ಟ ಹಿನ್ನೆಲೆಯಲ್ಲಿ ಜಿಮ್ ಗಳಿಗೆ ಮಾರ್ಗಸೂಚಿ ತರುವ ಬಗ್ಗೆ ಚರ್ಚಿಸಲಾಗುತ್ತಿದ್ದು, ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳಲ್ಲಿ ಮಾರ್ಗಸೂಚಿ ತರುವ ಕುರಿತು ಖ್ಯಾತ ಹೃದಯ ತಜ್ಞರೊಂದಿಗೆ ಚರ್ಚಿಸಿ ಶೀಘ್ರವೇ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಒಂದೆರಡು ಘಟನೆಗಳನ್ನು ಆಧರಿಸಿ ಜಿಮ್ ಮಾಡುವುದೇ ತಪ್ಪು ಎಂದು ಹೇಳುವುದು ಸರಿಯಲ್ಲ. ಹೀಗಾಗಿ ಮಾರ್ಗಸೂಚಿ ತರಲು ಚಿಂತನೆ ನಡೆದಿದೆ. ಖ್ಯಾತ ಹೃದಯ ತಜ್ಞರಾದ ಡಾ.ಸಿ.ಎನ್. ಮಂಜುನಾಥ್, ಡಾ. ವಿವೇಕ್ ಚೌಳಿ, ಡಾ. ದೇವಿಶೆಟ್ಟಿ, ಅಮೆರಿಕದ ರಂಗಧಾಮ್ ಅವರ ಬಳಿ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಮಾರ್ಗಸೂಚಿ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.