ಕೇರಳ, ಅ. 31 (DaijiworldNews/SM): ಕೊರೋನಾ ಕಾರಣದಿಂದಾಗಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ನಿಯಂತ್ರಣ ಹೇರಲಾಗಿದೆ. ಆದರೆ, ಈ ಬಾರಿ ಹತ್ತು ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಈಗಾಗಲೇ ಅಯ್ಯಪ್ಪ ದರ್ಶನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಪ್ರತಿದಿನ ಕೇವಲ 25 ಸಾವಿರ ಭಕ್ತರಿಗೆ ಮಾತ್ರವೇ ದರ್ಶನ ಪಡೆಯಲುಅವಕಾಶ ನೀಡಲಾಗಿದೆ. ಆದರೆ, ಈ ಬಾರಿ ನೋಂದಣಿ ಮಾಡಿಕೊಂಡವರ ಸಂಖ್ಯೆ ಭರ್ಜರಿಯಾಗಿದ್ದು, ಹತ್ತು ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿನ ವ್ಯವಸ್ಥೆಗಳ ಅವಲೋಕನವನ್ನು ಮಾಡುವ ನಿಟ್ಟಿನಲ್ಲಿ ಸಮೀಪದ ಪಂಬಾದಲ್ಲಿ ನಡೆದ ಉನ್ನತ ಮಟ್ಟದ ಮೌಲ್ಯಮಾಪನ ಸಭೆಯ ಬಳಿಕ ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ನಿತ್ಯ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡುವ ಮೂಲಕ ಒಟ್ಟು 15.25 ಲಕ್ಷ ಜನರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಬಹುದು." ಭಕ್ತರಿಗೆ ಲಸಿಕೆ, ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.