ನವದೆಹಲಿ, ಅ.31 (DaijiworldNews/HR): ಕಳೆದ 70 ವರ್ಷಗಳಿಂದ ನಿರ್ಮಿಸಿದ ಆಸ್ತಿಯನ್ನು ಬಿಜೆಪಿಯವರು ಮಾರಾಟ ಮಾಡಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ರೈಲ್ವೆ, ವಿಮಾನ ನಿಲ್ದಾಣ, ರಸ್ತೆಗಳನ್ನು ಸ್ಥಾಪಿಸಿತು. ಅವೆಲ್ಲವನ್ನೂ ಮಾರುತ್ತಿದ್ದಾರೆ. 70 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆ ಎಂದು ಅವರು ಕೇಳುತ್ತಾರೆ. ಅವರು ಕೇವಲ 7 ವರ್ಷಗಳಲ್ಲಿ 70 ವರ್ಷಗಳ ಪ್ರಯತ್ನವನ್ನು ವ್ಯರ್ಥ ಮಾಡಿದ್ದಾರೆ" ಎಂದರು.
ಇನ್ನು ಬಿಜೆಪಿಯ ಅವಧಿಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿದ್ದು, ಯುಪಿಯಲ್ಲಿ 5 ಕೋಟಿ ನಿರುದ್ಯೋಗಿ ಯುವಕರಿದ್ದಾರೆ. ನಿರುದ್ಯೋಗದಿಂದ ಪ್ರತಿದಿನ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನದೇಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ, "ದಲಿತರು, ನೇಕಾರರು, ಒಬಿಸಿಗಳು, ಬಡವರು, ಅಲ್ಪಸಂಖ್ಯಾತರು ಮತ್ತು ಬ್ರಾಹ್ಮಣರು ಶೋಷಣೆಗೆ ಒಳಗಾಗಿದ್ದು, ಯೋಗಿ ಆದಿತ್ಯನಾಥ್ ಅವರು ಗುರು ಗೋರಖನಾಥರ ಬೋಧನೆಗೆ ವಿರುದ್ಧವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.