ಕೋಲ್ಕತ್ತ, ಅ.31 (DaijiworldNews/HR): ಇತ್ತಿಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಜೀಬ್ ಬ್ಯಾನರ್ಜಿ ಭಾನುವಾರ ಮತ್ತೆ ಟಿಎಂಸಿಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀಬ್ ಬ್ಯಾನರ್ಜಿ ಅವರು ಏಪ್ರಿಲ್- ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಇನ್ನು ಈ ಹಿಂದಿನ ಮಮತಾ ಸರ್ಕಾರದಲ್ಲಿ ರಾಜೀಬ್ ಬ್ಯಾನರ್ಜಿ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ಆಶಿಶ್ ದಾಸ್ ಸಹ ರಾಜೀಬ್ ಅವರೊಂದಿಗೆ ಟಿಎಂಸಿ ಸೇರಿದ್ದಾರೆ.