ಧಾರವಾಡ, ಅ.31 (DaijiworldNews/HR): ಧಾರ್ಮಿಕ ಮತಾಂತರ ನಿಲ್ಲಿಸಬೇಕು. ಒಂದು ವೇಳೆ ಮತಾಂತರಗೊಂಡಿದ್ದರೆ ಅದನ್ನು ಬಹಿರಂಗಪಡಿಸಿ ಎಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಮತಾಂತರ ವಿರೋಧಿ ಕಾನೂನುಗಳನ್ನು ವಿರೋಧಿಸುವುದು ತೆರೆದ ರಹಸ್ಯ" ಎಂದಿದ್ದಾರೆ.
ಇನ್ನು ಅರುಣಾಚಲಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಮತಾಂತರ ವಿರೋಧಿ ಮಸೂದೆ ಅಂಗೀಕರಿಸಿದ್ದು, ಪ್ರಸ್ತುತ ಬಿಜೆಪಿ ಆಡಳಿತದ ಮೊದಲು ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಸಿಎಂ ವಿದರ್ಭ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಮಸೂದೆ ಅಂಗಿಕರಿಸಿತ್ತು ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮ ಬದಲಿಸುವ ಸ್ವಾತಂತ್ರ್ಯವಿದೆ ಆದರೆ ಇಂದು ಬಲವಂತದ ಮತಾಂತರಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.