ನವದೆಹಲಿ, ಅ.31 (DaijiworldNews/PY): "ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಂದ ಪಡೆದ ಪ್ರೇರಣೆಯ ಫಲವಾಗಿ ಭಾರತ ಈಗ ಯಾವುದೇ ಸವಾಲು ಎದುರಿಸಲು ಸಮರ್ಥವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾರತ, ಬಾಹ್ಯ ಹಾಗೂ ಆಂತರಿಕವಾಗಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿದೆ" ಎಂದಿದ್ದಾರೆ.
"ಭೂಮಿ, ಕಡಲು ಅಥವಾ ವಾಯುಪ್ರದೇಶ ಯಾವುದೇ ಭಾಗದ ಮುಖೇನ ಎದುರಾಗುವ ಸವಾಲುಗಳನ್ನು ಎದುರಿಸಲು ಭಾರತ ಹಿಂದಿಗಿಂತಲೂ ಹೆಚ್ಚು ಸಮರ್ಥವಾಗಿದೆ" ಎಂದು ತಿಳಿಸಿದ್ದಾರೆ.
"ಪಟೇಲ್ ಅವರಿಗೆ, ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯೇ ಆದ್ಯತೆಯಾಗಿತ್ತು. ಭಾರತ ಅಭಿವೃದ್ದಿ ಹೊಂದಿದ, ಸಮರ್ಥವಾದ, ಸಂವೇದನಾಶೀಲ ದೇಶವಾಗಬೇಕು ಎಂದು ಅವರು ಇಚ್ಛಿಸಿದ್ದರು. ದೇಶದ ಜನತೆ ಒಗ್ಗಟ್ಟನ್ನು ಕಾಪಾಡಿಕೊಂಡಲ್ಲಿ ಮಾತ್ರವೇ ಭಾರತ ತನ್ನ ಗುರಿ ಮುಟ್ಟು ಸಾಧ್ಯ" ಎಂದಿದ್ದಾರೆ.