ದಾವಣಗೆರೆ, ಅ.31 (DaijiworldNews/PY): "ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಮಾಡುತ್ತೇವೆ. ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ" ಎಂದು ವಸತಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ದಾವಣೆಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ" ಎಂದಿದ್ದಾರೆ.
"ಬೆಂಗಳೂರು ಉಸ್ತುವಾರಿ ಸ್ಥಾನ ಯಾರಿಗೆ ನೀಡಿದರೇನು? ಅದು ಸಿಎಂ ಅವರ ಪರಮಾಧಿಕಾರ" ಎಂದು ಹೇಳಿದ್ದಾರೆ.
"ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆದಿದ್ದು, ಹಾನಗಲ್ನಲ್ಲಿ ಶೇ.83ರಷ್ಟು, ಸಿಂದಗಿಯಲ್ಲಿ ಶೇ.69ರಷ್ಟು ಮತದಾನವಾಗಿದೆ. ಸಿಂದಗಿಯಲ್ಲಿ 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಜಯ ಸಾಧಿಸಲಿದೆ" ಎಂದಿದ್ದಾರೆ.