ಬೆಂಗಳೂರು, ಅ.31 (DaijiworldNews/HR): ಭಾರತದ ಎರಡನೇ ಅಮಿತಾ ಬಚ್ಚನ್ ಆಗಿ ಬೆಳೆಯುವ ಸಾಮಥ್ರ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಪುನಿತ್ ಅವರು ಪವರ್ ಸ್ಟಾರ್ ಅಷ್ಟೆ ಅಲ್ಲ, ಅಜಾತ ಶತ್ರುವಾಗಿದ್ದರು. ಮೂರು ದಿನಗಳಿಂದ ರಾಜ್ಯಾದ್ಯಂತ ಜನರು ಬಂದು ಜನ ಬಂದ ಗೌರವ ಸಲ್ಲಿಸಿದ್ದಾರೆ, ಗೌರವ ಪೂರ್ವಕವಾಗಿ ಕಳಿಸಿಕೊಟ್ಟಿದ್ದಾರೆ" ಎಂದರು.
"ಪುನೀತ್ ನಿಧನದ ಬಗ್ಗೆ ವಿನಯ ಕಾಲ್ ಮಾಡಿ ತಿಳಿಸಿದ್ದು, ನನಗೆ ನಂಬಲು ಆಗಿಲ್ಲ. ಈಗಲೂ ಆಗುತ್ತಿಲ್ಲ. ನಮ್ಮ ನೆರೆ ಹೊರೆಯಲ್ಲಿದ್ದರು. ಇತ್ತೀಚೆಗೆ ಪುನೀತ್ ನಮ್ಮ ಕುಟುಂಬದವರನ್ನು ಆಹ್ವಾನಿಸಿದ್ದರು, ಎರಡು ಕುಟುಂಬಗಳು ಒಟ್ಟಾಗಿ ಊಟ ಮಾಡಿದ್ದೇವು" ಎಂದಿದ್ದಾರೆ.
ಇನ್ನು ಪುನೀತ್ ಅವರದು ಕಲಾವಿದನ ಬದುಕು ಮಾತ್ರವಲ್ಲ, ಅವರಿಗೆ ಸಾಮಾಜಿಕ ಬದ್ಧತೆ ಇತ್ತು. ಸರ್ಕಾರ ಯಾವುದೇ ಕೆಲಸಕ್ಕೆ ಕರೆದರು ನಿರಾಕರಿಸುತ್ತಿರಲಿಲ್ಲ" ಎಂದು ಹೇಳಿದ್ದಾರೆ.