ಬೆಂಗಳೂರು, ಅ.31 (DaijiworldNews/PY): ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳು ನವೆಂಬರ್ 2ರಿಂದ ಮಧ್ಯಾಹ್ನದ ಬಿಸಿಯೂಟದೊಂದಿಗೆ ಪೂರ್ಣ ಅವಧಿಯ ತರಗತಿಗಳು ಪ್ರಾರಂಭವಾಗಲಿವೆ.
ಅ.25 ರಿಂದ 1 ರಿಂದ 5 ನೇ ತರಗತಿಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದ್ದು, ಅರ್ಧ ದಿನ ಮಾತ್ರ ತರಗತಿಗಳಲ್ಲಿ ನಡೆಸಲು ಸೂಚನೆ ನೀಡಿತ್ತು.
ನವೆಂಬರ್ 2ರ ಮಂಗಳವಾರದಿಂದ ಪ್ರಾಥಮಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದ್ದು, ಶಿಕ್ಷಣ ಇಲಾಖೆ ಇದಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆ ಪ್ರಾಥಮಿಕ ಶಾಲೆಗಳನ್ನು ಅ.25ರಿಂದ ಆರಂಭಿಸಲಾಗಿತ್ತು. ಇದೀಗ ನವೆಂಬರ್ 2ರಿಂದ ಪೂರ್ಣ ಪ್ರಮಾಣದ ತರಗತಿಗಳು ಪ್ರಾರಂಭವಾಗಲಿವೆ.