ನವದೆಹಲಿ, ಅ.31 (DaijiworldNews/PY): ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳ ಬಗ್ಗೆ ಸುಪ್ರೀಂ ಕೋರ್ಟ್ಗೆ ಪರಿಷ್ಕೃತ ಹೇಳಿಕೆ ಸಲ್ಲಿಸಿರುವ ರಾಜ್ಯ ಸರ್ಕಾರ, ಗಡಿಪಾರು ಯೋಚನೆ ಇಲ್ಲ ಎನ್ನುವ ಇತ್ತೀಚೆಗಿನ ಹೇಳಿಕೆಯಿಂದ ಹಿಂದೆ ಸರಿದಿದೆ.
ಪೊಲೀಸರು 126 ಮಂದಿ ರೋಹಿಂಗ್ಯಾಗಳನ್ನು ಯಾವುದೇ ನಿರಾಶ್ರಿತರ ಶಿಬಿರದಲ್ಲಿ ಅಥವಾ ಬಂಧನದಲ್ಲಿ ಇರಿಸಿಲ್ಲ ಎಂದು ಅ.26ರಂದು ಸಲ್ಲಿಸಿರುವ ಪರಿಷ್ಕೃತ ಹೇಳಿಕೆಯಲ್ಲಿ ಕರ್ನಾಟಕ ಗೃಹ ಇಲಾಖೆಯು ತಿಳಿಸಿದೆ.
ರಾಜ್ಯದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ರೋಹಿಂಗ್ಯಾಗಳನ್ನು ಗಡಿಪಾರು ಮಾಡಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ, ವಕೀಲ ಆಶ್ವಿನಿ ಕುಮಾರ್ ಉಪಾಧ್ಯಾಯ ಅವರು 2017ರಲ್ಲಿ ಸಲ್ಲಿಸಿದ್ದ ಪಿಐಎಲ್ಗೆ ಸಂಬಂಧಪಟ್ಟಂತೆ ನ್ಯಾಯಪೀಠಕ್ಕೆ ಅಕ್ಟೋಬರ್ ಮೊದಲ ವಾರ ಲಿಖಿತ ಹೇಳಿಕೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಈ ಅರ್ಜಿ ವಿಚಾರಣೆಗೆ ಅರ್ಹ ಹಾಗೂ ಸಮರ್ಥನೀಯವಲ್ಲ, ಇದನ್ನು ವಜಾಗೊಳಿಸಬೇಕು ಎಂದಿತ್ತು.
ರಾಜ್ಯ ಸರ್ಕಾರದ ವಿರುದ್ದ ಅರ್ಜಿದಾರರು ಯಾವುದೇ ರೀತಿಯಾದ ನಿರ್ದಿಷ್ಟ ಆರೋಪಗಳನ್ನು ಮಾಡಿಲ್ಲ. ಈ ಬಗ್ಗೆ ನ್ಯಾಯಪೀಠ ಹೊರಡಿಸುವ ಯಾವುದೇ ಆದೇಶವನ್ನು ಪಾಲಿಸಲಾಗುವುದು ಎಂದು ಇದೀಗ ಸಲ್ಲಿಸಿರುವ ಹೇಳಿಕೆಯಲ್ಲಿ ಹೇಳಿದೆ.