ಗೋರಖ್ ಪುರ, ಅ. 30(DaijiworldNews/HR): ಉತ್ತರ ಪ್ರದೇಶದ ಗೋರಖ್ ಪುರದ ಸರ್ಕಾರಿ ಶಾಲೆಯ ತರಗತಿಯೊಳಗೆ ಮೊಬೈಲ್ ಫೋನ್ ಬಳಸಬೇಡಿ ಎಂದು ಹೇಳಿದ ಶಿಕ್ಷಕನನ್ನು ಕೆಲವು ವಿದ್ಯಾರ್ಥಿಗಳು ಥಳಿಸಿದ್ದು, ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಂದರ್ಭಿಕ ಚಿತ್ರ
ಗೋರಖ್ ಪುರ ನಗರದ ಸರ್ಕಾರಿ ಶಾಲೆಯ ಕಂಪ್ಯೂಟರ್ ಶಿಕ್ಷಕ ಸಯ್ಯದ್ ವಾಸಿಕ್ ಅಲಿ ಅವರಿಗೆ
9ನೇ ತರಗತಿ ವಿದ್ಯಾರ್ಥಿಯೊಬ್ಬ ಇತರ ಇಬ್ಬರು ವಿದ್ಯಾರ್ಥಿಗಳೊಂದಿಗೆ, ಮೊಬೈಲ್ ಬಳಸುವುದನ್ನು ನಿಲ್ಲಿಸುವಂತೆ ಹೇಳಿದ ಗೋರಖ್ ಪುರ ನಗರದ ಸರ್ಕಾರಿ ಶಾಲೆಯ ಕಂಪ್ಯೂಟರ್ ಶಿಕ್ಷಕ ಸಯ್ಯದ್ ವಾಸಿಕ್ ಅಲಿ ಅವರ ಮುಖವನ್ನು ಕಪ್ಪು ಬಟ್ಟೆ ಬಳಸಿ ಮುಚ್ಚಿ ಹಲ್ಲೆ ನಡೆಸಿದ್ದಾರೆ.
ವಾಸಿಕ್ ಸಲ್ಲಿಸಿದ ಲಿಖಿತ ದೂರನ್ನು ಆಧರಿಸಿ, ಒಬ್ಬ ಹೆಸರಿನ ಮತ್ತು ಇಬ್ಬರು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಸರು ಹೇಳಲಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ನಂತರ, ಅವನನ್ನು ಬಾಲಾಪರಾಧಿಮನೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.