ನವದೆಹಲಿ, ಅ.30 (DaijiworldNews/PY): 5-11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ ಕೊರೊನಾ ಲಸಿಕೆ ನೀಡಲು ಆಹಾರ ಹಾಗೂ ಔಷಧ ಆಡಳಿತ ಅನುಮೋದನೆ ನೀಡಿದೆ.
ಎಫ್ಡಿಎ ಸಲಹಾ ಸಮಿತಿಯು ಸರ್ವಾನುಮತದಿಂದ ಮತ ಚಲಾಯಿಸಿದ ಎರಡು ದಿನಗಳ ಬಳಿಕ ಮಕ್ಕಳಿಗೆ ನೀಡುವ ಕುರಿತು ಅಂತಿಮ ಆದೇಶವನ್ನು ಹೊರಡಿಸಲಾಗಿದೆ.
"ನಮ್ಮ ತೀರ್ಮಾನದಿಂದ ನಿಮ್ಮ ಮಕ್ಕಳನ್ನು ರಕ್ಷಿಸುವುದರೊಂದಿಗೆ ಇದರಿಂದ ಅವರು ಸಾಮಾನ್ಯವಾದ ಜೀವನಕ್ಕೆ ಮರಳಬಹುದು" ಎಂದು ಎಫ್ಡಿಎ ಲಸಿಕೆ ಮುಖ್ಯಸ್ಥ ಡಾ. ಪೀಟರ್ ಮಾರ್ಕ್ಸ್ ತಿಳಿಸಿದ್ದಾರೆ.
"5-11ರ ವಯೋಮಾನದವರಿಗೆ ಕೊರೊನಾ ಲಸಿಕೆ ಹಾಕುವುದು ಅವರನ್ನು ಆರೋಗ್ಯವಾಗಿಡಲು ಹಾಗೂ ಅವರ ಕುಟುಂಬಗಳಿಗೆ ನೆಮ್ಮದಿ ನೀಡುವಲ್ಲಿ ಪ್ರಮುಖವಾಗಿದೆ" ಎಂದು ಅಕಾಡೆಮಿ ಅಧ್ಯಕ್ಷ ಡಾ. ಲೀ ಸವಿಯೋ ಬೀರ್ಸ್ ಹೇಳಿದ್ದಾರೆ.