ಮುಂಬೈ, ಅ 30 (DaijiworldNews/MS): ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ 23 ವರ್ಷದ ಪುತ್ರ ಆರ್ಯನ್ ಖಾನ್, ಡ್ರಗ್ಸ್-ಆನ್ ಕ್ರೂಸ್ಗೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಯಿಂದ ಬಂಧಿಸಲ್ಪಟ್ಟ 26 ದಿನಗಳ ನಂತರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಜೈಲು ಸೇರಿರುವ ಆರ್ಯನ್ ಖಾನ್ ಅವರು ಇಂದು ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಲಿದ್ದಾರೆ. ಇದೇ ದಿನ ಬಿಡುಗಡೆ ಹೊಂದುತ್ತಿರುವ ಇತರ ಕೈದಿಗಳ ಜೊತೆಗೆ ಅವರನ್ನೂ ಬಂಧಮುಕ್ತಗೊಳಿಸಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನ ಹೊರಗಿನ ಜಾಮೀನು ಆದೇಶ ಪೆಟ್ಟಿಗೆಯನ್ನು ಬೆಳಿಗ್ಗೆ 5:30 ರ ಸುಮಾರಿಗೆ ತೆರೆಯಲಾಗಿದ್ದು, ಅಧಿಕಾರಿಗಳು ಆರ್ಯನ್ ಸೇರಿದಂತೆ ಆರರಿಂದ ಏಳು ಜಾಮೀನು ಆದೇಶಗಳನ್ನು ಸಂಗ್ರಹಿಸಿದರು. ಅವರು ಒಂದು ಗಂಟೆಯೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ" ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.