ನವದೆಹಲಿ, ಅ.30 (DaijiworldNews/PY): ದೂರದರ್ಶನ ಹಾಗೂ ಬಾಲಿವುಡ್ ಚಿತ್ರರಂಗದ ನಟ ಯೂಸುಫ್ ಹುಸೇನ್ ಅವರು ಅ.30ರ ಶನಿವಾರ ಬೆಳಗ್ಗೆ ನಿಧನರಾದರು.
ಈ ಬಗ್ಗೆ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಟವರು ಟ್ವೀಟ್ ಮಾಡಿದ್ದು, ಯೂಸುಫ್ ಹುಸೇನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಹಿಂದಿ ದೂರದರ್ಶನ ಸೇರಿದಂತೆ ಚಲನಚಿತ್ರ ಕ್ಷೇತ್ರದಲ್ಲಿ ಯೂಸುಫ್ ಹುಸೇನ್ ಅವರು ಅನೇಕ ದಶಕಗಳ ಕಾಲ ಕೆಲಸ ಮಾಡಿದ್ದರು. ಅಲ್ಲದೇ, ವಿವಿಧ ಪಾತ್ರಗಳನ್ನು ಕೂಡಾ ಅವರು ನಿರ್ವಹಿಸಿದ್ದರು.
ಯೂಸುಫ್ ಹುಸೇನ್ ಅವರು, ರಯೀಸ್, ಧೂಮ್, ಹಜಾರೋನ್ ಖ್ವಾಯ್ಶೆನ್ ಐಸಿ, ಧೂಮ್- 2, ರಾಜ್, ದಿಲ್ ಚಾಹ್ತಾ, ಓ ಮೈ ಗಾಡ್, ಕ್ರಿಶ್-3, ದಬಾಂಗ್-3, ತಾಷ್ಕೆಂಟ್ ಫಿಲ್ಮ್ಸ್, ಜಿಲೇಬಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಮುಲ್ಲಾ ನಸ್ರುದ್ದೀನ್, ಕುಂಕುಮ್: ಏಕ್ ಪ್ಯಾರಾ ಸಾ ಬಂಧನ್, ಶ್..!, ಕೋಯಿ ಹೈ, ಸಿ.ಐ.ಡಿ. ತುಮ್ ಬಿನ್ ಜಾನೂನ್ ಕಹಾನ್ ಇತ್ಯಾದಿ ಜನಪ್ರಿಯ ಟಿವಿ ಕಾರ್ಯಗಳಲ್ಲಿ ಯೂಸುಫ್ ಹುಸೇನ್ ಅವರು ಕಾಣಿಸಿಕೊಂಡಿದ್ದರು.