ವಿಜಯನಗರ, ಅ 30 (DaijiworldNews/MS): ನಟ ಪುನೀತ್ ರಾಜ್ಕುಮಾರ್ ರವರ ಧಿಡೀರ್ ಅಗಲುವಿಕೆಯ ಸುದ್ದಿ ತಿಳಿದು ತೀವ್ರ ಮನನೊಂದಿದ್ದ ಅಭಿಮಾನಿಯೊಬ್ಬರು ತುಂಗಾಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ನಡೆದಿದೆ.
ಮೃತರನ್ನು ಕಮಲಾಪುರದ 14 ನೇ ವಾರ್ಡ್ ನ ಕಮ್ಮಾರ ದಿನ್ನಿ ಬಡಾವಣೆ ನಿವಾಸಿ ಕಾಳಪ್ಪ (60) ಎಂದು ಗುರುತಿಸಲಾಗಿದೆ ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ತೀವ್ರ ಮನನೊಂದು ತುಂಗಾಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಳಪ್ಪ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಮಧ್ಯಾಹ್ನ ಪುನೀತ್ ಅವರ ನಿಧನದ ಸುದ್ದಿ ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಯಾವುದೇ ಅಹಾರ - ನೀರು ಸೇವಿಸದೆ ನೊಂದುಕೊಂಡು ಕುಳಿತಿದ್ದರು. ಸಂಜೆ ತೀವ್ರ ದುಃಖಿತರಾಗಿ ಕಾಲುವೆಗೆ ಜಿಗಿದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಧಾವಿಸಿ ಅವರನ್ನು ರಕ್ಷಣೆ ಮಾಡಿದ್ದರು. ಆದರೆ ರಾತ್ರಿ ಮತ್ತೆ ಮನೆಯಿಂದ ಹೋಗಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಪ್ಪ ಅವರ ಮೃತದೇಹ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ
ಇನ್ನು ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಎಂಬ 30 ವರ್ಷದ ಯುವಕ ಪುನೀತ್ ರಾಜ್ಕುಮಾರ್ ರವರ ಸಾವಿನ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.