ಮುಂಬಯಿ, ಅ.29 (DaijiworldNews/HR): ಐಶಾರಾಮಿ ಹಡಗಿನಲ್ಲಿನ ಡ್ರಗ್ಸ್ ಪ್ರಕರಣ ಬಿಜೆಪಿಯ ವ್ಯವಸ್ಥಿತ ಸಂಚು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದು, ಇದು ಬಾಲಿವುಡ್ ಅನ್ನು ಮುಂಬೈನಿಂದ ಸ್ಥಳಾಂತರಿಸುವುದಕ್ಕೆ ಬಿಜೆಪಿಯು ಪಿತೂರಿ ನಡೆಸಿದೆ ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ನೋಯ್ಡಾದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವ ಕುರಿತು ಸಿನಿಮಾ ಕ್ಷೇತ್ರದ ಗಣ್ಯರ ಜತೆ ಸಭೆಗಳನ್ನು ನಡೆಸಿರುವ ಬಗ್ಗೆ ಮಲಿಕ್ ಉಲ್ಲೇಖಿಸಿದ್ದು, ಬಾಲಿವುಡ್ ಅನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವ ಬಿಜೆಪಿ ಸಂಚು ಇದಾಗಿದೆ ಎಂದರು.
ಇನ್ನು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ಭಯದಿಂದ ಬಂಧನದಿಂದ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ಮಲಿಕ್ ತಿಳಿಸಿದ್ದಾರೆ.
ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಹಾಗೂ ಇತರರರನ್ನು ಬಂಧಿಸಿದ್ದು, ಆರ್ಯನ್ ಖಾನ್ 13 ಷರತ್ತುಗಳಿಗೆ ಒಪ್ಪಿ ನ್ಯಾಯಾಲಯದ ಆದೇಶದಂತೆ ಜಾಮೀನು ಪಡೆದುಕೊಂಡಿದ್ದಾರೆ.