ಪಣಜಿ, ಅ.29 (DaijiworldNews/PY): "ರಾಜ್ಯದಲ್ಲಿ ಕೇಂದ್ರದ ದಾದಾಗಿರಿ ಸಂಭವಿಸಲು ಬಿಡುವುದಿಲ್ಲ" ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇನ್ನು ಮುಂದೆ ದೆಹಲಿಯಿಂದ ಯಾವುದೇ ಬೆದರಿಕೆ ಇರುವುದಿಲ್ಲ. ನಾನು ಗೋವಾದ ಸಿಎಂ ಆಗಲು ಬಯಸುವುದಿಲ್ಲ" ಎಂದಿದ್ದಾರೆ.
"ನಾನು ಭಾರತೀಯ. ಹೊರಗಿನವರಲ್ಲ. ಹಾಗಾಗಿ ನಾನು ಎಲ್ಲಿ ಬೇಕಾದರೂ ಹೋಗಬಹುದು. ಪಶ್ಚಿಮ ಬಂಗಾಳ ನನ್ನ ಮಾತೃಭೂಮಿಯಾಗಿದ್ದರೆ, ಗೋವಾ ಕೂಡಾ ನನ್ನ ಮಾತೃಭೂಮಿ. ನಾನು ಗೋವಾಕ್ಕೆ ಬರುತ್ತೇನೆ. ನನ್ನ ಪೋಸ್ಟರ್ಗಳನ್ನು ಅವರು ವಿರೂಪಗೊಳಿಸಿದ್ದಾರೆ" ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಭೇಟಿಗೂ ಮುನ್ನ ಗೋವಾದಲ್ಲಿ ಅವರ ಚಿತ್ರಗಳಿದ್ದ ಹಲವಾರು ಹೋರ್ಡಿಂಗ್ಗಳನ್ನು ವಿರೂಪಗೊಳಿಸಲಾಯಿತು. ಕರಾವಳಿ ರಾಜ್ಯದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ ಅವರು ಗುರುವಾರ ಸಂಜೆ ಗೋವಾಕ್ಕೆ ಆಗಮಿಸಿದ್ದರು.