ಮಿರ್ಜಾಪುರ, ಅ 29 (DaijiworldNews/MS): ಖಾಸಗಿ ಶಾಲೆಯೊಂದರಲ್ಲಿ 7 ವರ್ಷದ ವಿದ್ಯಾರ್ಥಿಗೆ ಸಣ್ಣ ತಪ್ಪಿಗೆ ಅಮಾನುಷ ಶಿಕ್ಷೆ ವಿಧಿಸಿರುವ ಭೀಕರ ಘಟನೆ ಮಿರ್ಜಾಪುರ. ಬೆಳಕಿಗೆ ಬಂದಿದೆ, ಶಿಸ್ತಿನ ಹೆಸರಲ್ಲಿ ಪ್ರಾಂಶುಪಾಲರು ಮಗುವನ್ನು ಶಾಲೆ ಬಾಲ್ಕನಿಯಲ್ಲಿ ತಲೆಕೆಳಗಾಗಿ ನೇತು ಹಾಕಿದ್ದಾರೆ. ಈ ಬಗ್ಗೆ ವೀಡಿಯೊ ಮತ್ತು ಫೋಟೋ ವೈರಲ್ ಆದಾಗ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕನ ತಂದೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಹ್ರೌರಾದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಸೋನು ಯಾದವ್ (೭) ತರಗತಿ ನಡುವೆ ಗೋಲ್ ಗಪ್ಫಾ ತಿನ್ನವ ಆಸೆಯಿಂದ ಹೋಗಿದ್ದಾನೆ. ಬಾಲಕನ ಸಣ್ಣ ಸಣ್ಣ ತಪ್ಪಿಗೆ ಸಂಸ್ಥೆ ಶಾಲಾ ವ್ಯವಸ್ಥಾಪಕ ಮತ್ತು ಪ್ರಾಂಶುಪಾಲರ ಮನೋಜ್ ವಿಶ್ವಕರ್ಮ ಕೋಪವು ನೆತ್ತಿಗೇರಿತ್ತು. ಕೋಪದಿಂದ ಶಿಕ್ಷಕ ಮಗುವನ್ನು ಬಾಲ್ಕನಿಯಿಂದ ಕೋಪದಿಂದ ಶಿಕ್ಷಕ ಮಗುವನ್ನು ಬಾಲ್ಕನಿಯಿಂದ ತಲೆಕೆಳಗಾಗಿ ದೀರ್ಘಕಾಲದವರೆಗೆ ನೇತುಹಾಕಿದ್ದಾನೆ. ಏತನ್ಮಧ್ಯೆ, ಯಾರೋ ಫೋಟೋ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ, ಅದು ನಂತರ ವೈರಲ್ ಆಗಿದೆ.
ಘಟನೆಯ ಬಳಿಕ ಬಾಲಕ ಆಘಾತಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ. " ಶಾಲೆಯಿಂದ ಹಿಂದಿರುಗಿದ ನಂತರ ಸೋನು ಯಾರೊಂದಿಗೂ ಏನನ್ನೂ ಹೇಳಲಿಲ್ಲ ಮತ್ತು ಅಳುತ್ತಲೇ ಇದ್ದ ಯಾರೊಂದಿಗೂ ಏನು ಮಾತನಾಡಲು ಹೆದರುತ್ತಾನೆ. ಸಾಕಷ್ಟು ಒತ್ತಾಯಿಸಿದಾಗ, ಆತ ಘಟನೆಯ ಬಗ್ಗೆ ವಿವರಿಸಿದ್ದು ಅಂದೇ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಬಾಲಕನ ತಂದೆ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಇನೊಂದೆಡೆ ಇಡೀ ಘಟನೆ ನಡೆದ ನಂತರ ಪ್ರಾಶುಂಪಾಲ ಮನೋಜ್ ವಿಶ್ವಕರ್ಮ ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ, ಮಗುವನ್ನು ಆಕಸ್ಮಿಕವಾಗಿ ಸಂಭವಿಸಿದ್ದು, ಇದಕ್ಕಾಗಿ ಮಗುವಿನ ಪೋಷಕರಲ್ಲಿ ಕ್ಷಮೆಯನ್ನೂ ಯಾಚಿಸಿದ್ದೆ ಎಂದಿದ್ದಾರೆ.