ಪುಣೆ, ಅ.28 (DaijiworldNews/HR): ಯುದ್ಧದ ಹೊಸ ಕ್ಷೇತ್ರಗಳು ದೇಶದ ಗಡಿಗಳಿಂದ ನಾಗರಿಕ ಸಮಾಜಗಳಿಗೆ ಸ್ಥಳಾಂತರಗೊಂಡಿದ್ದು, ಜನರ ಆರೋಗ್ಯ, ಯೋಗಕ್ಷೇಮ, ಭದ್ರತೆಯಂತಹ ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ಪ್ರತ್ಯೇಕವಾಗಿ ನಿಭಾಯಿಸಲು ಸಾಧ್ಯವಿಲ್ಲ. ರಾಷ್ಟ್ರಗಳ ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳನ್ನು ಸಾಧಿಸಲು ಯುದ್ಧಗಳು ಹೆಚ್ಚು ವೆಚ್ಚದಾಯಕವಾಗಿ ಪರಿಣಮಿಸಿವೆ" ಎಂದರು.
ಇನ್ನು "ಯುದ್ಧದ ಹೊಸ ಕ್ಷೇತ್ರಗಳು ಗಡಿಗಳಿಂದ ನಾಗರಿಕ ಸಮಾಜಗಳಿಗೆ ಸ್ಥಳಾಂತರಗೊಂಡಿದ್ದು, ಸಾಮಾನ್ಯ ಜನರ ಆಲೋಚನೆ, ಅವರ ಗ್ರಹಿಕೆ, ಆರೋಗ್ಯ, ಯೋಗಕ್ಷೇಮದ ಪ್ರಜ್ಞೆ ಮತ್ತು ಸರ್ಕಾರದ ಗ್ರಹಿಕೆಯು ಈ ನಿಟ್ಟಿನಲ್ಲಿ ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ" ಎಂದು ಹೇಳಿದ್ದಾರೆ.