ನವದೆಹಲಿ, ಅ.28 (DaijiworldNews/PY): ದೇಶದಲ್ಲಿ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿರಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್ 30ರವರೆಗೆ ಕೊರೊನಾ ಮಾರ್ಗಸೂಚಿಗಳನ್ನು ವಿಸ್ತರಿಸಿದೆ.
"ಚಲನಚಿತ್ರ ಮಂದಿರಗಳು, ಮನರಂಜನಾ ಉದ್ಯಾನವನಗಳು ಹಾಗೂ ಕ್ರೀಡಾಪಡುಗಳಿಗೆ ಈಜುಕೊಳಗಳನ್ನು ತೆರೆಯಲು ಅವಕಾಶ ನೀಡಿದ್ದು, ನವೆಂಬರ್ 30ರವೆರೆಗೆ ಹೊರಗಿನ ಕಂಟೈನ್ಮೆಂಟ್ ವಲಯಗಳ ಪ್ರದೇಶಗಳಲ್ಲಿ ಅನ್ವಿಯಿಸುತ್ತದೆ" ಎಂದು ಗೃಹ ವ್ಯವಹಾರಗಳ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
"ಈ ಹಿಂದೆ ಸೆ.30ರಂದು ಹೊರಡಿಸಲಾದ ಮಾರ್ಗಸೂಚಿಗಳು ಅ.31ರವರೆಗೆ ಜಾರಿಯಲ್ಲಿದ್ದವು. ಆದೇಶದ ಪ್ರಕಾರ, ಲಾಕ್ಡೌನ್ ಅನ್ನು ಈ ಅವಧಿಯಲ್ಲಿ ಕಟ್ಟುನಿಟ್ಟಾಗಿ ಕಂಟೈನ್ಮೆಂಟ್ ವಲಯಗಳಲ್ಲಿ ಜಾರಗೊಳಿಸಲಾಗುವುದು. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ನಿರ್ವಾಹಕರು ಕೊರೊನಾದ ಸೋಕ್ತ ನಡವಳಿಕೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಪ್ರಯತ್ನಿಸಬೇಕು. ಮಾಸ್ಕ್, ಸಾಮಾಜಿಕ ಅಂತರವನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು" ಎಂದು ಸಚಿವಾಲಯ ತಿಳಿಸಿದೆ.