ನಾಗ್ಪುರ್, ಅ.28 (DaijiworldNews/HR): ಪ್ರತಿಭಟನಾಕಾರರ ಸೋಗಿನಲ್ಲಿ ಬಂದಿದ್ದ ಇಬ್ಬರು ಉಗ್ರರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಬಂಧಿತ ನಕ್ಸಲ್ರನ್ನು ಮುಡಾ ಮುಸಾ ಜೋಹಿ (32) ಹಾಗೂ ಮೈನು ದೋರ್ಪೇಟ್ (30) ಎಂದು ಗುರುತಿಸಲಾಗಿದೆ.
ಗಢ್ಚಿರೋಲಿ ಜಿಲ್ಲೆಯ ಇಟ್ಟಪಲ್ಲಿ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಸೂರಜ್ಗಡ ಮೈನಿಂಗ್ ಪ್ರಾಜೆಕ್ಟ್ ವಿರುದ್ಧ ಇಟ್ಟಪಲ್ಲಿ ತಾಲೂಕಿನ ಅನೇಕ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು, ಈ ವೇಳೆ ಪ್ರತಿಭಟನಾಕಾರರ ಸೋಗಿನಲ್ಲಿ ಬಂದು, ವಿದ್ವಂಸಕ ಕೃತ್ಯಗಳನ್ನು ನಡೆಸಲು ತೀರ್ಮಾನಿಸಿದ್ದ ನಕ್ಸಲರನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.
ಇನ್ನು ಬಂಧಿತರು 'ಗಟ್ಟಾ ಎಲ್ಒಎಸ್ ಆಫ್ ಸಿಪಿಐ' ಸಂಘಟನೆಗೆ ಸೇರಿದ್ದು, ಕಳೆದ ಎರಡು ವರ್ಷಗಳಿಂದ ಈ ನಕ್ಸಲರು ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.