ಬೆಂಗಳೂರು, ಅ.28 (DaijiworldNews/PY): "ಪೈರೆಸಿ ಪಿಡುಗು ಸಮಸ್ಯೆ ನಿವಾರಣೆಗೆ ಕ್ರಮದ ಕುರುತು ಚರ್ಚೆ ಮಾಡಲಾಗಿದೆ. ಪೈರೆಸಿ ತಡೆಗೆ ಸಿಸಿಬಿ ಹಾಗೂ ಸೈಬರ್ ತಂಡದ ಜಂಟಿ ಕಾರ್ಯಾಚರಣೆ ಪಡೆ ನೇಮಕ ಮಾಡಿದ್ದು, ಕಣ್ಣಿಡಲಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು," ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆಗೆ ಪುನಃ ತಿದ್ದುಪಡಿ ತರುತ್ತಿದ್ದೇವೆ. ತಂತ್ರಜ್ಞಾನ ಈಗ ಬದಲಾಗಿದೆ" ಎಂದಿದ್ದಾರೆ.
"ಇತ್ತೀಚಿಗಿನ ಟೆಕ್ನಾಲಜಿ ಬಂದಿದ್ದು, ಯಾವ ಬದಲಾವಣೆ ಅವಶ್ಯವಿದೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಬೇರೆ ಬೇರೆ ಇಲಾಖೆಯವರ ಸಲಹೆ ಪಡೆಯಲಾಗಿದೆ. ಈ ಹಿಂದೆ ಸಿನಿಮಾ ತಯಾರಕರೊಂದಿಗೂ ಕೂಡಾ ಸಮಾಲೋಚನೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
"ಪೈರೆಸಿ ಪಿಡುಗು ಸಮಸ್ಯೆ ನಿವಾರಣೆಗೆ ಕ್ರಮದ ಬಗ್ಗೆ ಚರ್ಚಿಸಲಾಗಿದೆ. ಪೈರೆಸಿ ಕಂಡು ಹಿಡಿದು, ಆರೋಪಗಳನ್ನು ಪತ್ತೆ ಮಾಡಿ, ಕಣ್ಣಿಡಲು ಸಿಸಿಬಿ ಹಾಗೂ ಸೈಬರ್ ತಂಡದ ಜಂಟಿ ಕಾರ್ಯಾಚರಣೆ ಪಡೆ ನೇಮಕ ಮಾಡಿದ್ದು, ಕಣ್ಣಿಡಲಾಗಿದೆ" ಎಂದಿದ್ದಾರೆ.
"ಶಿಕ್ಷೆ ಪ್ರಮಾಣ ಕಾಯ್ದೆಯಲ್ಲಿದೆ. ಲಕ್ಷಾಂತರ ಮಂದಿಗೆ ಅನ್ನ ನೀಡುವ ಉದ್ಯಮವಾಗಿದ್ದು, ತಯಾರಿಕರಿಗೆ ರಕ್ಷಣೆ ಬೇಕಿದೆ" ಎಂದು ಹೇಳಿದ್ದಾರೆ.