ನವದೆಹಲಿ, ಅ.28 (DaijiworldNews/HR): ದೀಪಾವಳಿ ಸಂಧರ್ಭದಲ್ಲಿ ಪಟಾಕಿಯನ್ನು ನಿಷೇಧಿಸುವ ಮೂಲಕ ನಿರ್ದಿಷ್ಟ ಗುಂಪು ಅಥವಾ ಸಮುದಾಯಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ್ದು, ಸಂತೋಷದ ನೆಪದಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಯನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಂಭ್ರಮಾಚರಣೆಯ ನೆಪದಲ್ಲಿ ತಯಾರಕರು ನಾಗರಿಕರ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ. ನಾವು ನಿರ್ದಿಷ್ಟ ಸಮುದಾಯದ ವಿರುದ್ಧ ಅಲ್ಲ. ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಇಲ್ಲಿದ್ದೇವೆ ಎಂದು ಪೀಠ ಹೇಳಿದೆ.
ಇನ್ನು ಎಲ್ಲಾ ಪಟಾಕಿಗಳನ್ನು ನಿಷೇಧಿಸಲಾಗಿಲ್ಲ. ಇದು ದೊಡ್ಡ ಸಾರ್ವಜನಿಕ ಹಿತಾಸಕ್ತಿಯಾಗಿತ್ತು. ಒಂದು ನಿರ್ದಿಷ್ಟ ಅನಿಸಿಕೆ ಸೃಷ್ಟಿಯಾಗುತ್ತಿದೆ. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿಷೇಧಿಸಲಾಗಿದೆ ಎಂದು ಬಿಂಬಿಸಬಾರದು" ಎಂದಿದೆ.
ನಾವು ಪಟಾಕಿ ಮೇಲೆ 100 ಪ್ರತಿಶತ ನಿಷೇಧ ಹೇರಿಲ್ಲ. ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದಾಗಿ ದೆಹಲಿಯ ಜನರು ಏನನ್ನು ಅನುಭವಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪೀಠ ಹೇಳಿದೆ.