ಲುಧಿಯಾನ, ಅ 28 (DaijiworldNews/MS): ಇಬ್ಬರು ವಿದ್ಯಾರ್ಥಿನಿಯರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿ ಹಠಾತ್ತನೆ ಸೃಷ್ಟಿಯಾದ ಬೃಹತ್ ಹೊಂಡಕ್ಕೆ ಬಿದ್ದ ಘಟನೆ ಪಂಜಾಬ್ನ ಲುಧಿಯಾನ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ತಮ್ಮ ಶಾಲಾ ಸಮವಸ್ತ್ರದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ನಿಧಾನವಾಗಿ ನೀರು ತುಂಬಿಕೊಳ್ಳುತ್ತಿದ್ದ ಹೊಂಡದಿಂದ ಹೊರಬರಲು ಕಬ್ಬಿಣದ ಏಣಿಯನ್ನು ನೀಡಿ ಹೊರಬರಲು ಸ್ಥಳೀಯರೊಬ್ಬರು ಸಹಾಯ ಮಾಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಹೋಂಡಾ ಆಕ್ಟಿವಾ ಗುಂಡಿಯೊಳಗೆ ಕೆಸರಿನಲ್ಲಿ ಸಿಲುಕಿಕೊಂಡಿದೆ.
ಹೊಂಡದಲ್ಲಿ ನೀರು ಮತ್ತು ಒಳಚರಂಡಿ ಕೊಳವೆಗಳು ಹಾದುಹೋಗಿವೆ. ಘಟನೆ ನಡೆದ ಸುಮಾರು ಒಂದು ಗಂಟೆಯಲ್ಲಿ, ಕೆಸರು ಮಿಶ್ರಿತ ನೀರು ಹೊಂಡದಲ್ಲಿ ತುಂಬಿ ಹೋಗಿದೆ.
ಶಾಲೆಗೆಂದು ತೆರಳುತ್ತಿದ್ದ , ಘಟನೆಯಿಂದ ಗಾಯಗೊಂಡು ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಮೂಲಸೌಕರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಸ್ಥಳೀಯರು ನನ್ನ ಮಗಳು ಮತ್ತು ಆಕೆಯ ಸ್ನೇಹಿತೆಯನ್ನು ರಕ್ಷಿಸಲು ನಮಗೆ ಸಾಕಷ್ಟು ಸಹಾಯ ಮಾಡಿದರು ವಿದ್ಯಾರ್ಥಿನಿಯ ತಂದೆ ಘಟನೆಯ ಬಗ್ಗೆ ಪ್ರತ್ರಿಕ್ರಿಯಿಸಿದ್ದಾರೆ.
ಸ್ಥಳೀಯ ಆಡಳಿತವೂ ಹೊಂಡ ಮುಚ್ಚಲು ದುರಸ್ತಿ ಕಾರ್ಯ ಆರಂಭಿಸಿದೆ.