ಬೆಂಗಳೂರು, ಅ.28 (DaijiworldNews/PY): ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆ ಬಿಸಿ ಮುಟ್ಟಿದ್ದು, ಅಕ್ಟೋಬರ್ 28ರಂದು ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸತತ ಎರಡನೇ ದಿನವೂ ಏರಿಕೆ ಕಂಡಿವೆ.
ದೆಹಲಿಯಲ್ಲಿ ಪೆಟ್ರೋಲ್ ದರ 108.29 ರೂ.ಗೆ ಏರಿಕೆಯಾದರೆ, ಡೀಸೆಲ್ ದರ 97.02 ರೂ.ಗೆ ಹೆಚ್ಚಳವಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ಲೀಟರ್ಗೆ 114.14 ರೂ.ಗೆ ಹಾಗೂ ಡೀಸೆಲ್ ಲೀಟರ್ಗೆ 105.12 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 112.06 ರೂ., ಇದ್ದರೆ, ಡೀಸೆಲ್ ದರ 102.98 ರೂ. ನಿಗದಿಯಾಗಿದೆ.
ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 108.78 ರೂ.ಗೆ ಏರಿಕೆಯಾದರೆ, ಡೀಸೆಲ್ ದರ 100.14 ರೂ.ಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ ಪೆಟ್ರೋಲ್ ದರ 105.13 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 101.25 ರೂ.ಗಳಿಗೆ ಹೆಚ್ಚಳವಾಗಿದೆ.