ಶ್ರೀನಗರ, ಅ.28 (DaijiworldNews/PY): ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.
ಎನ್ಕೌಂಟರ್ನಲ್ಲಿ ಮೃತಪಟ್ಟ ಉಗ್ರನನ್ನು ಕುಲ್ಗಾಮ್ ಜಿಲ್ಲೆಯ ಜಾವೇದ್ ಅಹ್ವಾನಿ ಎಂದು ಗುರುತಿಸಲಾಗಿದೆ.
ಮೃತಪಟ್ಟ ಉಗ್ರ ಪೊಲೀಸರನ್ನು ಗುರಿಯಾಗಿಸಕೊಂಡು ಗುಂಡು ಹಾರಿಸಿದ್ದಾರೆ. ಇದಕ್ಕೆ ಪೊಲೀಸರು ಪ್ರತಿದಾಳಿ ನಡೆಸಿದ ಸಂದರ್ಭ ಉಗ್ರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಉಗ್ರನಿಂಂದ 1 ಪಿಸ್ತೂಲ್, 1 ಲೋಡೆಡ್ ಮ್ಯಾಗಜೀನ್ ಹಾಗೂ 1 ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ.
ಸ್ಥಳದಲ್ಲಿ ಹಲವು ಭಯೋತ್ಪಾದಕರು ಅವಿತಿರುವ ಸಾಧ್ಯತೆ ಇರುವ ಹಿನ್ನೆಲೆ ಶೋಧ ಕಾರ್ಯ ಚುರುಕುಗೊಳಿಸಲಾಗಿದ್ದು, ಸ್ಥಳ್ಕಕೆ ಹೆಚ್ಚಿನ ಯೋಧರನ್ನು ರವಾನಿಸಲಾಗಿದೆ.
"ಜಾವೇದ್ ಅಹ್ವಾನಿ ವಾನ್ಪೋಹ್ನಲ್ಲಿ ಬಿಹಾರದ ಇಬ್ಬರು ಕಾರ್ಮಿಕರನ್ನು ಹತ್ಯೆ ಮಾಡಲು ಭಯೋತ್ಪಾದಕ ಗುಲ್ಜಾರ್ಗೆ ಸಹಾಯ ಮಾಡಿದ್ದ. ಬಾರಾಮುಲ್ಲಾದಲ್ಲಿ ಅಂಗಡಿ ಮಾಲೀಕನ ಹತ್ಯೆಗೆ ಸಂಚು ರೂಪಿಸಿ ಗುರಿಯಾಗಿಸುವ ಕಾರ್ಯಾಚರಣೆಯಲ್ಲಿದ್ದರು" ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.