ಮೈಸೂರು, ಅ.25 (DaijiworldNews/PY): "ಪಕ್ಷದಲ್ಲಿ ಉಳಿಯುವುದು ಅಥವಾ ಬಿಡುವುದು ಶಾಸಕ ಜಿ ಟಿ ದೇವೇಗೌಡ ಅವರಿಗೆ ಬಿಟ್ಟ ವಿಚಾರವಾಗಿದೆ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಸಂಘದಿಂದ ನಡೆದ ಸಂವಾದದಲ್ಲಿ ಮಾತನಾಡಿದ ಅವರು, "ಜಿ ಟಿ ದೇವೇಗೌಡರು ನನ್ನ ಸಂಪರ್ಕ ಕಳೆದುಕೊಂಡು ಎರಡು ವರ್ಷ ಕಳೆದಿವೆ. ಅವರು ಪಕ್ಷದಲ್ಲಿ ಉಳಿಯುತ್ತಾರೆ ಎನ್ನುವ ಸಮಯ ಬಂದಾಗ ಮುಂದಿನ ಮಾತನ್ನು ತಿಳಿಸುತ್ತೇನೆ. ಪಕ್ಷದಲ್ಲಿ ಉಳಿಯುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಚಾರ" ಎಂದಿದ್ದಾರೆ.
ಜೆಡಿಎಸ್ ಅನ್ನು ಜೆಡಿಎಫ್ ಪಕ್ಷ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ವರುಣದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಿದ್ದು ಕುಟುಂಬ ರಾಜಕಾರಣ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ವೈದ್ಯ ವೃತ್ತಿ ಮಾಡುತ್ತಿದ್ದ ತಮ್ಮ ಕಿರಿಯ ಪುತ್ರನನ್ನು ಕ್ಷೇತ್ರದ ಚುನಾವಣೆಗೆ ಏಕೆ ತಂದು ನಿಲ್ಲಿಸಿದ್ದು?. ಯಾರಾದರೂ ನಿಷ್ಠಾವಂತರನ್ನು ಚುನಾವಣೆಗೆ ನಿಲ್ಲಿಸಬಹುದಿತ್ತು ಅಲ್ಲವೇ? ಇದು ಕುಟುಂಬ ರಾಜಕಾರಣ ಅಲ್ಲವೇ?" ಎಂದು ತಿರುಗೇಟು ನೀಡಿದ್ದಾರೆ.