ಲಕ್ನೋ, ಅ.25 (DaijiworldNews/HR): ಲಖಿಂಪುರ ಖೇರಿಯಲ್ಲಿ ರೈತರು ಮತ್ತು ಪತ್ರಕರ್ತರ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ವೈದ್ಯರ ಶಿಫಾರಸಿನ ಮೇರೆಗೆ ಲಖಿಂಪುರ ಜೈಲು ಅಧಿಕಾರಿಗಳು ಆಶಿಶ್ ಮಿಶ್ರಾ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಇನ್ನು ಆಶಿಶ್ ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ನಿನ್ನೆ ಅವರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಆಶಿಶ್ ವರದಿಯನ್ನು ಸ್ವೀಕರಿಸಿದ ನಂತರ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಎಸ್ಐಟಿ ಅವರನ್ನು ಜೈಲಿಗೆ ಕಳುಹಿಸಿತು ಎಂದು ಆಶಿಶ್ ಪರ ವಕೀಲ ಅವದೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.