ನವದೆಹಲಿ, ಅ. 24 (DaijiworldNews/SM): ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ ಬಳಿಕ ಡಿಜಿಟಲ್ ಪೇಮೆಂಟ್ ಆಪ್ ಗಳನ್ನು ಬಳಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಇದೀಗ ಫೋನ್ ಪೇ ಬಳಕೆದಾರರಿಗೆ ಕಂಪೆನಿ ಶಾಕ್ ಕೊಟ್ಟಿದೆ.
ವಾಲ್ಮಾರ್ಟ್ ಒಡೆತನದ ಡಿಜಿಟಲ್ ಪಾವತಿಗಳ ಆ್ಯಪ್ ಫೋನ್ ಪೇ ಇದೀಗ ವಹಿವಾಟುದಾರರಿಗೆ ಎಕ್ಸ್ ಟ್ರಾ ಚಾರ್ಜ್ ವಿಧಿಸಲು ಮುಂದಾಗಿದೆ. ಆರಂಭಿಕ ಹಂತದಲ್ಲಿ ಮೊಬೈಲ್ ರೀಚಾರ್ಜ್ ಗೆ ಹೆಚ್ಚುವರಿ ಮೊತ್ತ ವಿಧಿಸಬೇಕಾಗುತ್ತದೆ.
ಸದ್ಯ 50 ರೂ.ಗಿಂತ ಕಡಿಮೆ ರೀಚಾರ್ಜ್ ಗಳಿಗೆ ಶುಲ್ಕ ಇರುವುದಿಲ್ಲ. ಆದರೆ, 50 ರೂಪಾಯಿಗಿಂತ ಹೆಚ್ಚು ಮೊಬೈಲ್ ರಿಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1 ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುವುದು ಎಂದು ಕಂಪನಿ ಹೇಳಿದೆ. ರೂ 50 ರಿಂದ ರೂ. 100 ರ ನಡುವಿನ ರೀಚಾರ್ಜ್ ಗಳಿಗೆ ರೂ. 1 ಮತ್ತು ರೂ. 100 ಕ್ಕಿಂತ ಹೆಚ್ಚಕ್ಕೆ ಎರಡು ರೂ. ವಿಧಿಸಲಾಗುತ್ತದೆ.