ಕಲಬುರ್ಗಿ, ಅ.24 (DaijiworldNews/PY): "ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಾಕಿದ್ದೇ ನಾನು. ನನ್ನ ತಂಟೆಗೆ ಬಂದರೆ, ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುವೆ" ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿ ವಿರುದ್ದ ಕೆಂಡಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಬಸ್ ಮಾಲೀಕನೇ ಹೊರತು ನಿಮ್ಮ ರೀತಿ ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸುತ್ತಿರಲಿಲ್ಲ. ನಮ್ಮ ತಾತನ ಕಾಲದಿಂದಲೂ ಬಸ್ ಇದೆ. ಕುಮಾರಸ್ವಾಮಿ ಅವರನ್ನು ಸಾಕಿದ್ದೇ ನಾನು. ನನ್ನ ತಂಟೆಗೆ ಬಂದರೆ, ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇವೇಗೌಡರಿಂದಲೇ ನಾನು ಶಾಸಕನಾಗಿದ್ದು. ನನ್ನ ಮೇಲೆ ಅವರ ಋಣ ಇದೆ. ಆದರೆ, ಕುಮಾರಸ್ವಾಮಿ ಅವರಿಂದ ನಾನು ಶಾಸಕನಾಗಿಲ್ಲ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಹುಲಿ ಇದ್ದ ಹಾಗೆ. ಕುಮಾರಸ್ವಾಮಿ ಅವರು ಬೇಕಾದರೆ ಚರ್ಚೆಗೆ ಬರಲಿ, ಚರ್ಚೆಗೆ ನಾನು ಸಿದ್ಧ" ಎಂದಿದ್ದಾರೆ.
"2004ರಲ್ಲಿ ಕುಮಾರಸ್ವಾಮಿ ಅವರ ಆದಾಯ ಏನೂ ಇರಲಿಲ್ಲ. 2008ರಲ್ಲಿ 360 ಕೋಟಿ ರೂ. ಆದಾಯ ತೋರಿಸಿದ್ದಾರೆ. ಅವರಿಗೆ ಇಷ್ಟು ಆದಾಯ ಎಲ್ಲಿಂದ ಬಂತು?" ಎಂದು ಪ್ರಶ್ನಿಸಿದ್ದಾರೆ.
"ನಾನು ನಿಮ್ಮ ಹಾಗೆ ಬಿಬಿಎಂಪಿಯಲ್ಲಿ ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸುತ್ತಿರಲಿಲ್ಲ. ಒಂದು ವೇಳೆ ನನ್ನ ತಂಟೆಗೆ ಬಂದಲ್ಲಿ ನಿಮ್ಮ ಎಲ್ಲಾ ಪುರಾಣ ಬಿಚ್ಚಿಡುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ.