ಕಲಬುರ್ಗಿ, ಅ.24 (DaijiworldNews/PY): ಮೂವರು ಹೆಣ್ಣು ಮಕ್ಕಳೊಂದಿಗೆ ತಾಯಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿಯ ಮಾಡ್ಯಾಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಲಕ್ಷ್ಮೀ ಏಳಕೆ(28), ಮಕ್ಕಳಾದ ಸಾವಿತ್ರಿ (2 ವರ್ಷ) ಹಾಗೂ ಗೌರಮ್ಮ (6 ತಿಂಗಳು) ಮೃತ ದುರ್ದೈವಿಗಳು. 4 ವರ್ಷದ ಬಾಲಕಿ ಈಶ್ವರಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಲಕ್ಷ್ಮೀಗೆ ಮೂವರು ಹೆಣ್ಣು ಮಕ್ಕಳಾಗಿದ್ದ ಕಾರಣ ಗಂಡನ ಮನೆಯವರು ಗಂಡು ಮಗು ಆಗಲಿಲ್ಲ ಎಂದು ನಿತ್ಯ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಲಕ್ಷ್ಮೀ ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರ ರಕ್ಷಣೆಗೆ ಮುಂದಾಗಿದ್ದು, ಓರ್ವ ಬಾಲಕಿ ಮಾತ್ರ ಬದುಕುಳಿದಿದ್ದಾಳೆ.
ಘಟನಾ ಸ್ಥಳಕ್ಕೆ ನಿಂಬರ್ಗಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.