ಬೆಂಗಳೂರು, ಅ 24 (DaijiworldNews/MS): ಕಾಂಗ್ರೆಸ್ ಪಕ್ಷಕ್ಕೆ ಹೊಸ ಹೊಸ ಸದಸ್ಯತ್ವ ಪಡೆಯಲಿಚ್ಚಿಸುವವರು ಸದಸ್ಯತ್ವ ಷರತ್ತುಗಳ ವಿಧಿಸಿದ್ದು ಈ ವಿಚಾರವಾಗಿ ಬಿಜೆಪಿ ವ್ಯಂಗವಾಡಿದೆ. ವಿದೇಶಿ ವಿಮಾನ ನಿಲ್ದಾಣದಲ್ಲಿ ಯಾರೂ ಸಿಕ್ಕಿಬೀಳಬಾರದು ಎಂಬ ಕಾಳಜಿಯಿಂದ ಈ ನಿಯಮ ರೂಪಿಸಿರಬಹುದೇ? ಎಂದು ಕುಹಕವಾಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವು , ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಹಲವು ಷರತ್ತುಗಳಂತೆ! ಕುಡಿತ, ಡ್ರಗ್ಸ್ ಚಟ ಹೊಂದಿರಬಾರದು ಎಂಬ ಷರತ್ತು ವಿಧಿಸಿದೆ. ವಿದೇಶಿ ವಿಮಾನ ನಿಲ್ದಾಣದಲ್ಲಿ ಯಾರೂ ಸಿಕ್ಕಿಬೀಳಬಾರದು ಎಂಬ ಕಾಳಜಿಯಿಂದ ಈ ನಿಯಮ ರೂಪಿಸಿರಬಹುದೇ? #ನಕಲಿಕಾಂಗ್ರೆಸ್ಸದಸ್ಯತ್ವ' ಎಂದು ಟೀಕಿಸಿದೆ.
'ಕಾಂಗ್ರೆಸ್ ಸದಸ್ಯತ್ವ ಬೇಕಿದ್ದರೆ ಕಾನೂನು ಮೀರಿ ಹೆಚ್ಚಿನ ಆಸ್ತಿ ಸಂಪಾದಿಸಿರಬಾರದಂತೆ. ಅಕ್ರಮ ಸಂಪತ್ತಿನ ಮೂಲಕ ಕುಬೇರರಾದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಕೆಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಹಾಗೂ ನಕಲಿ ಗಾಂಧಿಗಳ ಸದಸ್ಯತ್ವ ರದ್ಧತಿಗೆ ಏನಾದರೂ ಯೋಜನೆ ರೂಪಿಸಿದ್ದೀರಾ?' ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಇನ್ನಷ್ಟು ಮಾನದಂಡಗಳು ಎಂದು ಮನೆಯ ಆಸ್ತಿಯನ್ನೇ ದೋಚುವ ಕಲೆ ಇರಬೇಕು. ದೇಶವನ್ನು ಲೂಟಿ ಮಾಡುವುದಕ್ಕೆ ಹೊಸ ಯೋಚನೆಗಳಿರಬೇಕು. ಸಾಧ್ಯವಾದರೆ ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಸಮೇತ ಸಿಕ್ಕಿ ಬೀಳಬೇಕು. ಗಾಂಧಿ ಹೆಸರನ್ನು ಕದಿಯುವ ಕಲೆ ಹೊಂದಿರಬೇಕು, ಊರಿನ ಕಟ್ಟೆ, ಕೊಳಾಯಿಗೆ ಒಂದು ಕುಟುಂಬದ ಹೆಸರಿಡಬೇಕು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗುವ ಛಲ ಬೇಕು. ಹಿರಿಯ ನಾಯಕರನ್ನು ಅವಮಾನಿಸುವ ಗುಣವಿರಬೇಕು. ಕಾಂಗ್ರೆಸ್ ಮುಕ್ತ ಭಾರತಕ್ಕೆ ಅವಿರತ ಪ್ರಯತ್ನಿಸಬೇಕು ಎಂದು ವ್ಯಂಗ್ಯವಾಡಿದೆ.