ನವದೆಹಲಿ, ಅ.24 (DaijiworldNews/PY): "ಕೊರೊನಾ ಲಸಿಕೆ ಅಭಿಯಾನದ ಹಿನ್ನೆಲೆ ಭಾರತದತ್ತ ಇಡೀ ವಿಶ್ವವೇ ನೋಡುತ್ತಿದೆ. 100 ಕೋಟಿ ಲಸಿಕೆ ಪೂರೈಸಿರುವುದು ಭಾರತದ ಸಾಮರ್ಥ್ಯವನ್ನು ತೋರಿಸಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ನಲ್ಲಿ ತಿಳಿಸಿದ್ದಾರೆ.
ಮನ್ ಕೀ ಬಾತ್ನ 82ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಲಸಿಕೆ ಶತಕಕ್ಕೆ ಕಾರಣವಾದ ಲಸಿಕೆ ತಯಾರಕರ ಪ್ರಯತ್ನಗಳನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದರು.
"ನಾವು ಸರ್ದಾರ್ ಪಟೇಲ್ ಅವರ ಜೀವನ ಹಾಗೂ ಆಲೋಚನೆಗಳಿಂದ ಬಹಳಷ್ಟು ಕಲಿಯಬಹುದಾಗಿದೆ. ಇತ್ತೀಚೆಗೆ ಭಾರತ ಸರ್ಕಾರದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಸರ್ದಾರ್ ಪಟೇಲ್ ಅವರ ಜೀವನ ಚರಿತ್ರೆಯನ್ನು ಪ್ರಕಟಿಸಿದೆ. ಇದನ್ನು ನನ್ನ ಯುವ ಸ್ನೇಹಿತರು ಓದಬೇಕು ಎಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.
"ಭಾರತ ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಮುಂದಿನ ತಿಂಗಳು ಆಚರಿಸುತ್ತಿದ್ದೇವೆ. ನಮಗೆ ಅವರ ಜೀವನವು ಹಲವು ವಿಷಯಗಳನ್ನು ಕಲಿಸಿದೆ" ಎಂದಿದ್ದಾರೆ.